ಇಂತಹ ಮಹಿಳೆಯರಿಗೆ ಗೃಹಲಕ್ಷ್ಮಿ 2ನೇ ಕಂತಿಗೆ ₹4000 ಜಮಾ! ರಾಜ್ಯ ಸರ್ಕಾರದ ಹೊಸ ನಿರ್ಧಾರ

0

ರಾಜ್ಯದ ಮುಖ್ಯಮಂತಿಯಾದ ಸಿದ್ದರಾಮಯ್ಯನವರಿಂದ ಗೃಹಲಕ್ಷ್ಮಿ ಯೋಜನೆಗೆ ಮೈಸೂರಿನಲ್ಲಿ ಅದ್ದೂರಿ ಚಾಲನೆ ಸಿಕ್ಕಿತು. ಮಹತ್ವಾಕಾಂಕ್ಷೆಯ ಗೃಹ ಲಕ್ಷ್ಮಿ ಯೋಜನೆ, ರಾಜ್ಯ ಸರ್ಕಾರ ಘೋಷಿಸಿದ ಐದು ಚುನಾವಣಾ ಪೂರ್ವ ಖಾತರಿಗಳಲ್ಲಿ ಒಂದಾಗಿದ್ದು, ಇದರ ಅಡಿಯಲ್ಲಿ ಮಾಸಿಕ ಒಂದು ಕೋಟಿಗೂ ಅಧಿಕ ಮಹಿಳೆಯರ ಕುಟುಂಬದ ಮುಖ್ಯಸ್ಥರ ಖಾತೆಗೆ 2,000 ಜಮಾ ಮಾಡಲಾಗಿದೆ. ಆದರೆ ಕೆಲವು ಮಹಿಳೆಯರ ಖಾತೆಗೆ ಮಾತ್ರ ಹಣ ಜಮಾ ಆಗಿದೆ. ಕೆಲವು ಮಹಿಳೆಯರು ಹಣ ಸಿಗದೆ ಅಸಮಧಾನ ತೊರುತ್ತಿದ್ದ ಬೆನ್ನಲೇ ಮತ್ತೊಂದು ಸುದ್ದಿ ಹೊರ ಬಿದ್ದಿದೆ.

Gruha Lakshmi Second Installment

ರಾಜ್ಯದಲ್ಲಿ ರೇಷನ್‌ ಕಾರ್ಡ್‌ ಹೊಂದಿರುವ ಕುಟುಂಬದ ಹಿರಿಯ ಮಹಿಳೆ ಅಥವಾ ಯಜಮಾನಿಗೆ ಪ್ರತಿ ತಿಂಗಳು 2000 ಹಣ ನೀಡುವ ದೊಡ್ಡ ಯೋಜನೆಯಾದ ಗೃಹಲಕ್ಷ್ಮೀ ಅನೇಕ ಮಹಿಳೆಯರಿಗೆ ದೊರೆಯದೆ ಸಮಸ್ಯೆ ಉಂಟುಮಾಡಿದೆ. ಗೃಹಲಕ್ಷ್ಮೀ ಯೋಜನೆಯಡಿ ಇನ್ನೂ ಹಲವಾರು ಮಹಿಳೆಯ ಖಾತೆಗೆ ಹಣ ಬರಬೇಕಿದೆ. ಹಣ ಬರದಿರಲು ಕಾರಣವೇನು ಎಂದು ಮಹತ್ವದ ನಿರ್ಧಾರವನ್ನು ತಿಳಿಸಿದೆ.

ಇದನ್ನು ಓದಿ: ಡ್ರೈವಿಂಗ್‌ ಲೈಸೆನ್ಸ್ ಮಾಡಿಸೋಕೆ ಇನ್ಮುಂದೆ ಹೊಸ ದಾಖಲೆ; ಹೇಗೆ ಅಪ್ಲೇ ಮಾಡಬೇಕು ಇಲ್ಲಿ ನೋಡಿ

ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣ ಸೆಪ್ಟೆಂಬರ್ 30ರ ಒಳಗೆ ಗೃಹಿಣಿಯರ ಖಾತೆಗೆ ಜಮಾ ಮಾಡಲು ಸರ್ಕಾರ ನಿರ್ಧರಿಸಿದೆ. ಮೊದಲ ಕಂತಿನ ಹಣ ಯಾರಿಗೆ ಸಂದಾಯವಾಗಿಲ್ಲವೋ ಅಂತವರಿಗೆ ಎರಡನೇ ಕಂತಿನ ಹಣವನ್ನು ಸೇರಿಸಿ 4000 ರೂ. ಗಳನ್ನು ಅಕ್ಟೋಬರ್ 15 ರ ಒಳಗೆ ಜಮಾ ಮಾಡುವುದಾಗಿ ಸರ್ಕಾರ ಭರವಸೆ ನೀಡಿದೆ. ಗೃಹಲಕ್ಷ್ಮಿ ಯೋಜನೆಗೆ ಒಟ್ಟು 1.13 ಕೋಟಿ ಗೃಹಿಣಿಯರು ಅರ್ಜಿ ಸಲ್ಲಿಸಿದ್ದಾರೆ.

ರಾಜ್ಯದ ಆಹಾರ ಇಲಾಖೆ ಮಹತ್ವದ ಘೋಷಣೆ ಮಾಡಿದೆ. ಗೃಹಲಕ್ಷ್ಮಿ ಹಣ ಮಹಿಳೆಯ ಖಾತಗೆ ಬರಲು ಪಡಿತರ ಚೀಟಿಯಲ್ಲಿ ಹೆಸರಿರಬೇಕು. ಈ ನಿಯಮದಡಿ ಗಂಡ, ಮಾವ ಅಥವಾ ಅಪ್ಪನ ಹೆಸರಿರುವ ರೇಷನ್‌ ಕಾರ್ಡ್‌ ನಲ್ಲಿ ಯಾಜಮಾನಿ ಮಹಿಳೆಯ ಹೆಸರನ್ನು ತಿದ್ದುಪಡಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಈ ತಿದ್ದುಪಡಿ ಚಾಲ್ತಿಯಲ್ಲಿರುವ ಕಾರಣ ಮಹಿಳೆಯ ಖಾತೆಗೆ ಹಣ ಜಮೆ ಆಗಿಲ್ಲ ಎಂದು ಮಾಹಿತಿ ತಿಳಿಸಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ಬಾಕಿ ಕಂತಿನ ಹಣವನ್ನು ಒಟ್ಟಿಗೆ ಖಾತೆಗೆ ಜಮಾ ಮಾಡಲಾಗುವುದು ಎನ್ನಲಾಗಿದೆ.

ಅರ್ಜಿ ತಿರಸ್ಕಾರ:

ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆಯಲು ಅನೇಕರು ರೇಷನ್‌ ಕಾರ್ಡ್ ಗಾಗಿ ಅರ್ಜಿ ಹಾಕಿದ್ದವರಲ್ಲಿ ಹಲವು ಅರ್ಜಿಗಳು ತಿರಸ್ಕೃತವಾಗಿದೆ. ಕಳೆದ 14 ದಿನದಲ್ಲಿ 53,000 ಅರ್ಜಿ ಸಲ್ಲಿಕೆಯಾಗಿದ್ದು 1.18 ಲಕ್ಷ ರೇಷನ್‌ ಕಾರ್ಡ್‌ ತಿದ್ದುಪಡಿ ಬಾಕಿ ಇದ್ದೂ ಆಹಾರ ಇಲಾಖೆ ತಿದ್ದುಪಡಿಗೆ ಅನುಮತಿ ನೀಡಿದೆ. ರೇಷನ್‌ ಕಾರ್ಡ್‌ ಬದಲಾವಣೆಗೆ ಅರ್ಜಿ ಸಲ್ಲಿದ್ದವರ ಅರ್ಜಿಯನ್ನು ತಿರಸ್ಕಾರ ಮಾಡಲಾಗಿದೆ.

ಇತರೆ ವಿಷಯಗಳು:

ಬೆಂಗಳೂರು ಬಂದ್‌ ಭದ್ರತೆಗಾಗಿ ಬಂದ ಪೊಲೀಸ್‌ ಸಿಬ್ಬಂದಿಗೆ ಸತ್ತ ಇಲಿಯ ಊಟ ಕೊಟ್ಟ ಸರ್ಕಾರ

ಕೇವಲ ಸ್ಮಾರ್ಟ್‌ ಫೋನ್‌ ಬೆಲೆಯಲ್ಲಿ TVS IQube ಎಲೆಕ್ಟ್ರಿಕ್ ಸ್ಕೂಟರ್ ದೊರೆಯುತ್ತದೆ, ಬರೀ 20 ಸಾವಿರಕ್ಕೆ ಮನೆಗೆ ತನ್ನಿ

Leave A Reply

Your email address will not be published.