ಗೃಹಲಕ್ಷ್ಮೀ ಹಣ ಬಿಡುಗಡೆಗೆ ಕೂಡಿ ಬಂತು ಗಳಿಗೆ..!ಒಂದೇ ದಿನ ಎಲ್ಲ ಮಹಿಳೆಯರಿಗೆ ಹಣ ಸಿಗಲ್ಲ; ಹಂತ ಹಂತವಾಗಿ ಬರಲಿದೆ ಖಾತೆಗೆ ಹಣ

0

ಹಲೋ ನಾಗರಿಕರೇ, ಕಾಂಗ್ರೆಸ್‌ನ 5 ಗ್ಯಾರೆಂಟಿಯಲ್ಲಿ ಗೃಹಲಕ್ಷ್ಮೀ ಯೋಜನೆಗೆ 30 ಕ್ಕೆ ಚಾಲನೆ ಸಿಗಲಿದೆ. ಈಗಾಗಲೇ ಮೈಸೂರಿನಲ್ಲಿ ಅದ್ದೂರಿ ವೇದಿಕೆ ರೆಡಿಯಾಗಿದೆ. ಕಾರ್ಯಕ್ರಮದ ಯಶಸ್ವಿಗೆ ಲಕ್ಷ್ಮೀ ಹೆಬ್ಬಾಳಕರ್‌ ಜೊತೆಗೆ ದಿಸಿಎಂ ಡಿಕೆ ಬೆನ್ನೆಲುಬಾಗಿ ನಿಂತಿದ್ದಾರೆ. ಮೈಸೂರಲ್ಲಿ ವಾಸ್ತವ ಹೊಂದಿರುವ ಡಿಕೆ ಕಾರ್ಯಕ್ರಮ ರಿರ್ಹಸಲ್‌ ಕೂಡ ನಡೆಸಿದ್ದಾರೆ. ಗೃಹಲಕ್ಷ್ಮೀ ಚಾಲನೆಗೆ ಏನೆಲ್ಲಾ ಸಿದ್ಧತೆ ಆಗಿದೆ? ಖಾತೆಗೆ ಹಣ ಹೇಗೆ ಜಮಾ ಆಗಲಿದೆ? ಒಂದೇ ಎಲ್ಲಾ ಮಹಿಳೆಯರ ಖಾತೆಗೆ ಹಣ ಬರತ್ತಾ? ಈ ಎಲ್ಲಾ ಮಾಹಿತಿಯ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ.

Gruhalakshmi Latest Update

ಗೃಹಲಕ್ಷ್ಮೀ ಯೋಜನೆಗೆ ಕೌಂಟ್‌ಡೌನ್ ಶುರುವಾಗಿದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಿದ್ದತೆ ಭರದಿಂದ ಸಾಗಿದೆ. ಇನ್ನೊಂದು ಕಡೆ ಮೈಸೂರಿನ ರಸ್ತೆಗಳು ನಾಯಕರ ಫ್ಲೆಕ್ಸ್‌ಗಳಿಂದ ರಾರಾಜಿಸುತ್ತಿವೆ. ಕಾರ್ಯಕ್ರಮ ಸಿದ್ದತೆಯನ್ನು ಪರೀಶಿಲಿಸಿದ ಡಿಕೆ, ಕಾಂಗ್ರೆಸ್‌ನ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಗೃಹಲಕ್ಷ್ಮೀ ಅತ್ಯಂತ ಪ್ರಮುಖವಾಗಿದೆ, ರಾಜ್ಯದ ಮನೆಯೊಡತಿಗೆ ಮಾಸಿಕ 2000 ಸಾವಿರ ರೂ ನೀಡುತ್ತೇವೆ ಎಂದು ಚುನಾವಣಾ ವೇಳೆ ಕಾಂಗ್ರೆಸ್‌ ಭರವಸೆ ನೀಡಿತ್ತು ಗೆದ್ದು 102 ದಿನಗಳಾಗಿವೆ. ಈಗ ಗೃಹಲಕ್ಷ್ಮೀ ಯೋಜನೆ ಚಾಲನೆಗೆ ಗಳಿಗೆ ಕೂಡಿ ಬಂದಿದೆ. ಸಿಎಂ ಸಿದ್ದರಾಮಯ್ಯ ತವರು ಮೈಸೂರು ಜಿಲ್ಲೆಯಲ್ಲಿ ಅದ್ದೂರಿ ಕಾರ್ಯಕ್ರಮಕ್ಕೆ ಸಕಲ ಸಿದ್ದತೆ ನೆಡೆದಿದೆ.

ಸಿಎಂ ಸಿದ್ದರಾಮಯ್ಯ AICCI ಅಧ್ಯಕ್ಷ ಮಲ್ಲಿಕಾರ್ಜುನ ಕರ್ಗೆ ಹಾಗೂ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಚಾಲನೆ ನೀಡಲಿದ್ದಾರೆ. ಈ ಕಾರ್ಯಕ್ರಮದ ಯಶಸ್ಸಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಟೊಂಕ ಕಟ್ಟಿ ನಿಂತಿದ್ದು, ಕಳೆದ 4-5 ದಿನಗಳಿಂದ ಭರ್ಜರಿ ಸಿದ್ಧತೆ ನೆಡೆಯುತ್ತಿದೆ. ಈಗ ಸಚಿವೆ ಲಕ್ಷ್ಮೀಗೆ ಡಿಸಿಎಂ ಡಿಕೆ ಹೆಗಲು ಕೊಟ್ಟಿದ್ದಾರೆ. ಡಿಸಿಎಂ ಕೂಡ ನಿನ್ನೆಯಿಂದ ವಾಸ್ತವ ಹೂಡಿದ್ದು ಕಾರ್ಯಕ್ರಮ ಸಿದ್ಧತೆ ಬಗ್ಗೆ ವೀಕ್ಷಣೆ ಮಾಡಿದ್ದು ಅಲ್ಲದೆ ಕಾರ್ಯಕ್ರಮದ ರಿಹರ್ಸಲ್‌ ಕೂಡ ಮಾಡಿದ್ದರು.

ಇದನ್ನೂ ಸಹ ಓದಿ: 60 ರ ನಂತರ ಐಷಾರಾಮಿ ಜೀವನದ ಬೆಸ್ಟ್‌ ಪ್ಲಾನ್..!‌ APY ಪಿಂಚಣಿ ಲಾಭ ಈಗ ಗಂಡ ಹೆಂಡತಿ ಇಬ್ಬರಿಗೂ

ಡಿಸಿಎಂ ಅಷ್ಟೆ ಅಲ್ಲ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ್ದರು. ಪ್ರತೀ ಗ್ರಾಮ ಪಂಚಾಯಿತಿ ಕಾರ್ಯಕ್ರಮ ಮಾಡಲು ತಿರ್ಮಾನಿಸಲಾಗಿದೆ. ಇನ್ನೂ ಗ್ರಾಮ ಪಂಚಾಯಿತಿಗಳಲ್ಲಿ ಮಾಡಿಕೊಂಡಿರೋ ಸಿದ್ದತೆ ಬಗ್ಗೆ ಜೂಮ್‌ ಮೀಟಿಂಗ್‌ ನೆಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಈಗಾಗಲೇ 50 ಲಕ್ಷ ಫಲಾನುಭವಿಗಳ ಅಕೌಂಟ್‌ಗಳು ಫೈನಲ್‌ ಆಗಿದ್ದೂ ಹಂತ ಹಂತವಾಗಿ ಫಲಾನುಭವಿಗಳ ಅಕೌಂಟ್ಗೆ ಹಣ ವರ್ಗಾವಣೆ ಆಗಲಿದೆ ಎಂದು ಡಿಸಿಎಂ ಮಾಹಿತಿ ನೀಡಿದರು.

ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮೀಗೆ ಕೌಂಟ್‌ಡೌನ್‌ ಶುರುವಾಗಿತ್ತು. ಈಗಾಗಲೇ ನೊಂದಣಿ ಮಾಡಿಕೊಂಡಿರುವ 1 ಕೋಟಿ 9 ಲಕ್ಷ ಫಲಾನುಭವಿಗಳ ಖಾತೆಗೆ ನಾಳೆಯಿಂದ ಹಣ ವರ್ಗಾವಣೆ ಆಗಲಿದೆ.

ಇತರೆ ವಿಷಯಗಳು:

Jio ರಕ್ಷಾಬಂಧನ ಬೆಂಕಿ ಆಫರ್..!‌ 30-31st ಆಗಸ್ಟ್‌ ಎರಡು ದಿನ ಮಾತ್ರ ಅವಕಾಶ, ವರ್ಷವಿಡಿ ಪಡೆಯಿರಿ 2.5 GB ಫ್ರೀ ಡೇಟಾ

ಅಂತೂ ಮಂಜೂರಾಯ್ತು ಗೃಹಲಕ್ಷ್ಮಿ ಹಣ.! ತಿಂಗಳಿಗೆ ₹2000 ದ ಕನಸು ನನಸು; ಮಹಿಳೆಯರು ಕೂಡಲೇ ಈ ಲಿಸ್ಟ್‌ ನಲ್ಲಿ ನಿಮ್ಮ ಹೆಸರನ್ನು ಚೆಕ್‌ ಮಾಡಿ

Leave A Reply

Your email address will not be published.