ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್..! ಸಿಲಿಕಾನ್ ಸಿಟಿ ಆಗಲಿದೆ ಈಗ ಸಂಪೂರ್ಣ ಮೆಟ್ರೋ ಸಿಟಿ; ಸೆ.15 ರಿಂದ ಹೊಸ ಸಂಚಾರ ಮಾರ್ಗಕ್ಕೆ ಮೂಹೂರ್ತ ಫಿಕ್ಸ್
ಹಲೋ ಸ್ನೇಹಿತರೆ, ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ. ಹೊಸ ಸಂಪೂರ್ಣ ನೇರಳೆ ಮಾರ್ಗ ಸಂಚಾರಕ್ಕೆ ಸಿದ್ದವಾಗಿದ್ದೂ ಮೆಟ್ರೋ ರೈಲುಗಳ ಸಂಚಾರ ಸೆ.15 ರ ಬಳಿಕ ಆರಂಭವಾಗಲಿದೆ. ಸದ್ಯ ಈ ಮಾರ್ಗದ 39.4 ಕಿ,ಮೀ ಮಾರ್ಗದ ಸಂಪೂರ್ಣ ಸಂಚಾರಕ್ಕೆ ಮುಕ್ತವಾಗಿದೆ. ಯಾವ ಮಾರ್ಗದಲ್ಲಿ ಆರಂಭವಾಗಲಿದೆ ಈ ಮೆಟ್ರೋ? ಯಾರಿಗೆಲ್ಲಾ ಅನುಕೂಲವಾಗಲಿದೆ? ಇದರ ವಿಶೇಷತೆ ಏನು? ಈ ಎಲ್ಲಾ ಮಾಹಿತಿಯ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ.
ಸಿಲಿಕಾನ್ ಸಿಟಿ ಬೆಂಗಳೂರಿನ ಜನರಿಗೆ BMRCL ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದೆ. ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ಚಲಘಟ್ಟ To ವೈಟ್‌ಫೀಲ್ಡ್ ಮಾರ್ಗ ಸಂಚಾರ ಮುಕ್ತಕ್ಕೆ ಮುಹೂರ್ತ ಫಿಕ್ಸ್. ಈ ತಿಂಗಳಲ್ಲೇ ಸಂಚಾರಕ್ಕೆ ಮುಕ್ತವಾಗಲಿದೆ ಎಂದು BMRCL ಹೇಳಿದೆ. ರೈಲ್ವೆ ಸುರಕ್ಷಿತ ಆಯುಕ್ತರು ಕೆಲವು ಸ್ಪಷ್ಟನೆಗಳು ಕೇಳಿದ್ದು ಅದನ್ನು ಸೆ.7 ತಾರೀಖು ಇಂದೇ ಸಲ್ಲಿಕೆ ಮಾಡಲಾಗುತ್ತಾ ಇದೆ. ಸಲ್ಲಿಕೆ ಬಳಿಕ ರೈಲ್ವೇ ಸುರಕ್ಷಿತ ಆಯುಕ್ತರು ಭಯಪ್ಪನಹಳ್ಳಿ To ಕೆಆರ್ ಪುರಂ ಮಾರ್ಗದ 2.1 ಕೀ ಮಿ ಮತ್ತು ಕೆಂಗೇರಿ To ಚಲಘಟ್ಟ ಮಾರ್ಗದ 2 ಕೀಮಿ ಮಾರ್ಗದಲ್ಲಿ ಪರಿಶೀಲನೆ ನೆಡೆಸಿ ವಾಣಿಜ್ಯ ಸಂಚಾರಕ್ಕೆ ಒಪ್ಪಿಗೆ ನೀಡಲಿದ್ದಾರೆ. ಸೆ. 15 ತಾರೀಖಿನ ಒಳಗೆ ಈ ಕಾರ್ಯಕ್ರಮಗಳು ಪೂರ್ಣಗೊಳ್ಳುವ ನಿರೀಕ್ಷೆ ಇತ್ತು. ಈಗಾಗಲೇ ಪ್ರಯೋಗಿಕ ಸಂಚಾರವನ್ನು ಪೂರ್ಣಗೊಳಿಸಿದೆ.
ಇದನ್ನೂ ಸಹ ಓದಿ: ಗೃಹಲಕ್ಷ್ಮೀ ಅಪ್ಡೇಟ್: 2000 ಹಣಕ್ಕಾಗಿ ಬ್ಯಾಂಕ್‌ನತ್ತ ಮಹಿಳೆಯರು; ಮೆಸೇಜ್ ಬಾರದೆ ಗೊಂದಲ! ಅಕೌಂಟ್ ಚೆಕ್ ಮಾಡಲು ಕ್ಯೂ
ನಮ್ಮ ಮೆಟ್ರೋ ನೇರಳೆ ವಿಸ್ತರಿತ ಮಾರ್ಗದಲ್ಲಿ ಸದ್ಯ ಭಯಪ್ಪನ ಹಳ್ಳಿ ಕೆಆರ್ ಪುರ ಕೆಂಗೇರಿ ಚಲಘಟ್ಟ ನಡುವೆ ಮೆಟ್ರೋ ರೈಲು ಸಂಚಾರ ಮಾಡುತ್ತಿಲ್ಲ ಸೆ.15 ರ ಬಳಿಕ ಯಾವಾಗಲಾದರೂ ಮಾರ್ಗ ಉಧ್ಘಾಟನೆಗೆ BMRCL ಸಿದ್ಧವಾಗಿದೆ. ಕೇಂದ್ರ ರಾಜ್ಯ ಸರ್ಕಾರಗಳ ಒಪ್ಪಿಗೆ ಬಳಿಕ ಅಂತಿಮ ದಿನಾಂಕ ನಿಗದಿ ಮಾಡಲಾಗುವುದು ಎಂದು ತಿಳಿಸಿದೆ.
ಪ್ರಧಾನಿ ಮೋದಿ ಮಾರ್ಚ್ 25 ತಾರೀಖು ವೈಟ್ ಫೀಲ್ಟ್ ಕೆಆರ್ ಪುರ ಮಾರ್ಗದ 13.7 ಕೀ ಮೀ ಮಾರ್ಗವನ್ನು ಉಧ್ಘಾಟನೆ ಮಾಡಿದ್ರು ಆದರೆ ಭಯಪ್ಪನ ಹಳ್ಳಿ ಕೆಆರ್ ನಡುವೆ ಮೆಟ್ರೋ ಸಂಚಾರ ಇಲ್ಲದ ಕಾರಣ ಪ್ರಯಾಣಿಕರು ಸಮಸ್ಯೆ ಎದುರಾಗಿತ್ತು. ಈಗ ಆ ಮಾರ್ಗವು ಸಂಚಾರಕ್ಕೆ ಮಕ್ತವಾಗಲಿದೆ. ಅದರಿಂದ ಚಲಘಟ್ಟ To ವೈಟ್‌ಫೀಲ್ಡ್ ನಡುವೆ ಸಂಪೂರ್ಣ ನೇರಳೆ ಮಾರ್ಗ ಆರಂಭವಾಗಲಿದೆ ನೇರಳೆ ಮಾರ್ಗದಲ್ಲಿ ಮೊದಲು MG ರಸ್ತೆ, ಮೈಸೂರು ರಸ್ತೆ ನಾಯಂಡಹಳ್ಲಿ ತನಕ ಮೆಟ್ರೋ ಸಂಚಾರ ಆರಂಭ ಮಾಡಲಾಯಿತು ಬಳಿಕ ನಾಯಂಡಹಳ್ಳಿಯಿಂದ ಕೆಂಗೇರಿ ತನಕ ರೈಲು ಸೇವೆ ಆರಂಭವಾಯಿತು. ಈಗ ಕೆಂಗೇರಿ ಯಿಂದ ಚಲಘಟ್ಟ ತನಕ ವಿಸ್ಕೃತಗೊಂಡಿರುವ ಮಾರ್ಗದಲ್ಲಿ ರೈಲು ಸಂಚಾರ ಆರಂಭಿಸಲಾಗುತ್ತೆ. ಟ್ರಾಫಿಕ್ ನಿಂದ ಕಂಗೆಟ್ಟಿದ್ದ ITBT ಮಂದಿಗೆ ಸದ್ಯ ಮೆಟ್ರೋ ಸಂಚಾರ ಸುದ್ದಿ ಸಂತಸ ತಂದಿದೆ.
ಇತರೆ ವಿಷಯಗಳು:
ಬೆಳ್ಳಂಬೆಳಿಗ್ಗೆ ಚಿನ್ನದ ಬೆಲೆ ಕೇಳಿ ಶಾಕ್ ಆದ ಜನತೆ..! ಇಂದಿನ ಚಿನ್ನದ ಬೆಲೆಯಲ್ಲಿ ಇಷ್ಟೊಂದು ವ್ಯತ್ಯಾಸ?