ಸ್ಮಾರ್ಟ್‌ ಫೋನ್ ಬಳಕೆದಾರರಿಗೆ ಹೊಸ ಸೂಚನೆ! ಈ ಆ್ಯಪ್‌ ಡೌನ್‌ ಲೋಡ್‌ ಮಾಡಿ ಮೋಸ ಹೋಗದಿರಿ

0

ಹಲೋ ಸ್ನೇಹಿತರೆ, ಪ್ರಸ್ತುತ ಸ್ಮಾರ್ಟ್‌ ಫೋನ್ ಎಲ್ಲರ ಜೀವನದಲ್ಲಿ ತುಂಬಾ ಪ್ರಯೋಜಕಾರಿ ಸಾಧನವಾಗಿದೆ. ಮೊಬೈಲ್‌ ಮೂಲಕ ಇಂದು ನಮ್ಮ ಎಲ್ಲ ಕೆಲಸಗಳನ್ನು ಮಾಡುತ್ತೇವೆ. ಇಂದು ಮೊಬೈಲ್‌ ಬಳಕೆ ಹೆಚ್ಚಾದಂತೆ ಮೋಸದ ಸಂಗತಿಗಳು ಸಹ ಹೆಚ್ಚಾಗುತ್ತಿವೆ. ದಿನದಿಂದ ದಿನಕ್ಕೆ ಆ್ಯಪ್ ಗಳು ಅಪ್ಲಿಕೇಶನ್ ಗಳ ಸಂಖ್ಯೆ ಹೆಚ್ಚುತ್ತಿದೆ. ಜನರು ಇದರಿಂದ ಆಕರ್ಷಿತಗೊಂಡು ಮೋಸದ ಜಾಲದಲ್ಲಿ ಬೀಳುತ್ತಿದ್ದಾರೆ. ಹಾಗೆಯೇ ಇತ್ತೀಚಿಗೆ ಆಂಡ್ರಾಯ್ಡ್‌ ಪೋನ್‌ ಬಳಕೆದಾರರ ಮೇಲೆ ಹ್ಯಾಕರ್ಗಳು ಕಣ್ಣು ಹಾಕಿದ್ದೂ ಕೆಲವು ಆ್ಯಪ್‌ ಡೌನ್‌ ಲೋಡ್‌ ಮಾಡಿದ ಕೂಡಲೇ ಮೋಸ ಹೋಗುವ ಸಾಧ್ಯತೆ ಹೆಚ್ಚಿರುತ್ತದೆ.

A new notice for smartphone users

ಇತ್ತೀಚಿನ ದಿನದಲ್ಲಿ ಟ್ರಾನ್ಸ್‌ಪರೆಂಟ್ ಟ್ರೈಬರ್ ಎಂದು ಕರೆಯುವ ಹ್ಯಾಕರ್‌ಗಳು ಆಂಡ್ರಾಯ್ಡ್‌ ಮೊಬೈಲ್‌ ಗಳನ್ನು ಹ್ಯಾಕ್‌ ಮಾಡಲು ಶರು ಮಾಡಿವೆ. ವೈಯಕ್ತಿಕ ಮಾಹಿತಿ ಪಡೆಯಲು ಆಟೋ-ರನ್ ವೆಬ್‌ಸೈಟ್‌ಗಳು ಮತ್ತು ಎಂಜಿನಿಯರಿಂಗ್ ತಂತ್ರಗಳನ್ನು ಬಳಕೆ ಮಾಡುತ್ತಿವೆ. ಇದಕ್ಕಾಗಿ ನಕಲಿ ಆ್ಯಪ್‌ ಬಳಕೆ ಮಾಡಲಾಗುತ್ತಿದೆ. ಈ ಕಾರಣಕ್ಕಾಗಿ ಸೈಬರ್ ಸೆಕ್ಯುರಿಟಿ ಸಂಸ್ಥೆ ಸೆಂಟಿನೆಲ್ ಒನ್ ಎಚ್ವರಿಕೆ ಸಹ ನೀಡಿದೆ.

ಇದನ್ನು ಓದಿ: ಇಂತಹ ಮಹಿಳೆಯರಿಗೆ ಗೃಹಲಕ್ಷ್ಮಿ 2ನೇ ಕಂತಿಗೆ ₹4000 ಜಮಾ! ರಾಜ್ಯ ಸರ್ಕಾರದ ಹೊಸ ನಿರ್ಧಾರ

ಈಗಾಗಲೇ ನಕಲಿ ಅಪ್ಲಿಕೇಶನ್‌ ಮೂಲಕ ಕಳುಹಿಸಲಾಗುತ್ತಿರುವ ಮಾಲ್‌ವೇರ್ ಅನ್ನು CapraRAT ಎಂದು ಕಂಡುಹಿಡಿಯಲಾಗಿದೆ. ಇದು ಬಳಕೆದಾರರ ಮಾಹಿತಿಯನ್ನು ಹ್ಯಾಕರ್‌ ಗಳಿಗೆ ನೀಡುತ್ತದೆ. ಈ ಹ್ಯಾಕರ್‌ ಗಳು ನಿಮ್ಮ ಕಾಲ್‌ಲಿಸ್ಟ್, ಪೋಟೋ, ಮೆಸೇಜ್‌ ಮಾಹಿತಿ ಪಡೆದು ಆಡಿಯೋ ರೆಕಾರ್ಡ್‌ ಮಾಡಬಹುದು ಹೀಗಾಗಿ ಎಚ್ಚರಿಕೆ ವಹಿಸುವುದು ಒಳ್ಳೆಯದು.

ಅನ್ ಇನ್‌ಸ್ಟಾಲ್ ಮಾಡಿ:

ನಿಮಗೆ ಬೇಕಾಗಿರುವ ಆ್ಯಪ್ ಅಥವಾ ಅಪ್ಲಿಕೇಶನ್‌ ಗಳನ್ನು ಮತ್ರ ಪ್ಲೆಸ್ಟೋರ್ ನಿಂದ ಡೌನ್ ಲೋಡ್ ಮಾಡಿಕೊಳ್ಳಿ. ಅನಗತ್ಯ ಆ್ಯಪ್ ಅಥವಾ ಅಪ್ಲಿಕೇಶನ್‌ ಗಳನ್ನು ಡೌನ್ ಲೋಡ್ ಮಾಡಿ ನಿಮ್ಮ ವೈಯಕ್ತಿಕ ಮಾಹಿತಿ ನಿಮ್ಮ ಪೋನ್‌ ನಂಬರ್‌ ಇತರೆ ಮಾಹಿತಿ ಹಂಚಿಕೊಳ್ಳದಿರಿ. ಈಗಾಗಲೇ ನಿಮ್ಮ ಪೋನ್‌ ನಲ್ಲಿ ಆ ರೀತಿಯ ಆ್ಯಪ್ ಅಥವಾ ಅಪ್ಲಿಕೇಶನ್‌ ಡೌನ್‌ಲೋಡ್‌ ಆಗಿದ್ದರೆ ನಿಮ್ಮ ಪೋನ್‌ ನಿಂದ ಅಳಿಸಿ ಹಾಕುವುದು ಒಳ್ಳೆಯದು.

ಇತರೆ ವಿಷಯಗಳು:

ಅಕ್ಟೋಬರ್ 1 ರಿಂದ ಹೊಸ ನಿಯಮ: ಆಧಾರ್-ಪ್ಯಾನ್, ಪಾಸ್‌ಪೋರ್ಟ್ ಮಾಡಲು ಈಗ ಈ ಡಾಕ್ಯುಮೆಂಟ್‌ ಬೇಕೇ ಬೇಕು

ಬ್ಯಾಂಕ್ ಗ್ರಾಹಕರಿಗೆ ಬಿಗ್ ರಿಲೀಫ್: ಕ್ರೆಡಿಟ್ ಕಾರ್ಡ್ ಪಾವತಿ ತಡವಾದರೆ ಟೆನ್ಷನ್ ಬೇಡ, ಹೊಸ ಮಾರ್ಗಸೂಚಿ ಬಿಡುಗಡೆ

Leave A Reply

Your email address will not be published.