15 ವರ್ಷದ ಹಳೆ ವಾಹನಗಳನ್ನು ಗುಜರಿಗೆ ಹಾಕುವ ಬಗ್ಗೆ ಮಹತ್ವದ ನಿರ್ಧಾರ ಕೈಗೊಂಡ ಸರ್ಕಾರ
ಸರ್ಕಾರವು 2022ರ ನೊಂದಾಯಿಸಿದ ವಾಹನಗಳ ಸ್ಕ್ರಾಪಿಂಗ್ ನೀತಿಯ ಅಡಿ 15 ವರ್ಷ ಆಗಿರುವ ಹಳೆಯ ವಾಹನಗಳನ್ನು ಗುಜರಿಗೆ ಹಾಕುವ ಮಾಹಿತಿಯ ಬಗ್ಗೆ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ವಾಹನಗಳನ್ನು ಗುಜರಿಗೆ ಹಾಕಿದರೆ ಸರ್ಕಾರಕ್ಕೆ ಆಗುವ ಖರ್ಚುಗಳೆಷ್ಟು? ಇದರಿಂದ ಮಾಲಿಕರಿಗೆ ಎಷ್ಟು ಪ್ರೋತ್ಸಾಹಧನ ಸಿಗಲಿದೆ? ಇಲ್ಲಿ ತಿಳಿಸಲಾಗಿದೆ ಓದಿ.
ಕೇಂದ್ರ ಸರ್ಕಾರವು 2022ರ ಪ್ರಕಾರ ನೊಂದಾಯಿಸಿದ ಸ್ಕ್ರಾಪಿಂಗ್ ನೀತಿಯಡಿ ರಾಜ್ಯದಲ್ಲಿ ಜಾರಿ ತರುವ ಮೂಲಕ ದೇಶಾದಾದ್ಯಂತ ಸರ್ಕಾರದ ವಾಹನಗಳನ್ನು ಗುಜುರಿಗೆ ಹಾಕಲು ನಿರ್ಧಾರ ಮಾಡಲಾಗಿದೆ. ಎಂದು ಸಭೆ ಕೈಗೊಂಡ ನಂತರ ಡಿಸಿಎಂ ಮಾಹಿತಿ ನೀಡಿದ್ದಾರೆ.
ಇದನ್ನು ಸಹ ಓದಿ: ಜನತೆಗೆ ರಾಜ್ಯ ಸರ್ಕಾರದ ಶಾಕ್..! ಅಕ್ಟೋಬರ್ 1 ರಿಂದ ಆಸ್ತಿ ನೋಂದಣಿ ದರ ಹೆಚ್ಚಳ
ಸರ್ಕಾರದ ಬಳಿ 15 ವರ್ಷ ಹಳೆಯದಾಗಿರುವ ಒಟ್ಟು 15,295 ವಾಹನಗಳಿದ್ದೂ ಎಲಾ ವಾಹನಗಳನ್ನೂ ಗುಜರಿಗೆ ಹಾಕಿ ಹೊಸ ವಾಹನ ಪಡೆಯಬೇಕಾಗಿ ನಿರ್ಧಾರ ಕೈಗೊಳ್ಳಲಾಗಿದೆ. ಈ ಯೋಜನೆಯಡಿ ಸರ್ಕಾರಕ್ಕೆ 500 ಕೋಟಿಗೂ ಹೆಚ್ಚು ಖರ್ಚಾಗಲಿದೆ. ಮೊದಲು 5000 ಹಳೆಯ ವಾಹನಗಳನ್ನು ಗುಜರಿಗೆ ಹಾಕಲು ತಿರ್ಮಾನಿಸಲಾಗಿದೆ. ನಂತರ ಹಂತ ಹಂತದ ಪ್ರಕ್ರಿಯೆ ಮೂಲಕ ಈ ಯೋಜನೆ ಪೂರ್ಣಗೊಳಿಸಲಾಗುವುದು. ಈ ಯೋಜನೆಗೆ ಕೇಂದ್ರ ಸರಕಾರದಿಂದ 100 ಕೋಟಿ ಸಹಾಯಧನ ಸಿಗಲಿದೆ ಎಂದು ಮಾಹಿತಿ ತಿಳಿದುಬಂದಿದೆ.
ಖಾಸಗಿ ವಾಹನಗಳಿಗೂ 15 ವರ್ಷ ಹಳೆಯ ವಾಹನಗಳನ್ನು ಗುಜರಿಗೆ ಹಾಕುವ ನೀತಿ ಅನ್ವಯವಾಗಲಿದೆ. ಕೇಂದ್ರ ಸರ್ಕಾರದಿಂದ ಖಾಸಗಿ ವಾಹಗಳಿಗೂ ಒತ್ತಡ ಹೇರುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಸರ್ಕಾರಿ ವಾಹನಗಳಿಗೆ ಮಾತ್ರ ಈ ನಿಯಮ ಜಾರಿಗೆ ಬರಲಿದೆ. ನಂತರ ಖಾಸಗಿ ವಾಹನಗಳಿಗೂ ಇದು ಅನ್ವಯವಾಗುವ ಸಾಧ್ಯತೆ ಇದೆ.
ಇತರೆ ವಿಷಯಗಳು:
ಮಹಿಳೆಯರಿಗೆ ಭರ್ಜರಿ ಗಿಫ್ಟ್: ಸರ್ಕಾರದ ಈ ಯೋಜನೆಯಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ
ಅಕ್ಟೋಬರ್ 1 ರಿಂದ ಹೊಸ ನಿಯಮ: ಆಧಾರ್-ಪ್ಯಾನ್, ಪಾಸ್‌ಪೋರ್ಟ್ ಮಾಡಲು ಈಗ ಈ ಡಾಕ್ಯುಮೆಂಟ್ ಬೇಕೇ ಬೇಕು