Rain Breaking: ರಾಜ್ಯದ ಹಲವೆಡೆ ವರುಣನಾರ್ಭಟ ಆರಂಭ..! 2 ದಿನ ರಾಜ್ಯಕ್ಕೆ ಹೈ ಅಲರ್ಟ್‌ ಘೋಷಣೆ

0

ಹಲೋ ಸ್ನೇಹಿತರೆ, ರಾಜ್ಯದಲ್ಲಿ ಈ ಬಾರಿ ಬರ ಆವರಿಸಿದೆ. ಮಳೆ ಇಲ್ಲದೆ ನದಿ ಕೆರೆಕಟ್ಟೆಗಳು ಒಣಗುತ್ತಿವೆ, ಜಲಾಶಯಗಳು ಬರಿದಾಗುತ್ತಿವೆ. ಅನ್ನದಾತ ತಲೆಮೇಲೆ ಕೈ ಇಟ್ಟು ಆಗಸ ನೋಡುವಂತಾಗಿದೆ. ಇದೆ ಹೊತ್ತಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ವರುಣ ಕೃಪೆ ತೋರಿದ್ದಾನೆ. 2 ದಿನದಲ್ಲಿ ರಾಜ್ಯದಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಯಾವ ಯಾವ ಜಿಲ್ಲೆಗಳಲ್ಲಿ ಮಳೆ ಆಗಲಿದೆ? ಈ ಮಾಹಿತಿಯ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ.

Rain Alert Karnataka Updates

130 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಬರ ತಾಂಡವಾಡುತ್ತಾ ಇದೆ. ರೈತರಿಗೆ ಜೀವನಾಡಿಯಾಗಿದ್ದ ನದಿ ಜಲಾಶಯಗಳು ಬರಿದಾಗುತ್ತಾ ಇವೆ. ಇಂದು ಮಳೆ ಚುರುಕುಗೊಂಡಿದ್ದು 2 ದಿನ ಭಾರೀ ಮಳೇಯ ಸುಳಿವು ಸಿಕ್ಕಿದೆ. ಅನ್ನದಾತರು ವರುಣನಿಗಾಗಿ ಬೇಡಿಕೊಳ್ಳುತ್ತಾ ಇದ್ದಾರೆ.

ರಾಜ್ಯದಲ್ಲಿ ಹವಾಮಾನ ಇಲಾಖೆ ಜನರಿಗೆ ಭಾರೀ ಮಳೆಯ ಅರ್ಲಟ್‌ ನೀಡಿದೆ. ಹಲವೆಡೆ ವರುಣನ ಅಬ್ಬರ ಆರಂಭವಾಗಿದೆ. ರಾಜ್ಯದ ಹಲವೆಡೆ ಬಿರುಗಾಳಿ ಸಹಿತ ಮಳೆಯಾಗಿದೆ. ಹುನಗುಂದ ತಾಲ್ಲೂಕಿನ ಸುಳಿಬಾವಿ ಗ್ರಾಮದಲ್ಲಿ ಆವಾಂತರವೇ ಸೃಷ್ಟಿಯಾಗಿದೆ. ಭಾರೀ ಗಾಳಿ ಮಳೆಗೆ ಜನರು ಹೆದರಿ ನಿಂತಿದ್ದಾರೆ. ಕಲಬುರ್ಗಿಯಲ್ಲಿ ಮಳೆ ಅಬ್ಬರಿಸಿದೆ, ನಿನ್ನೆ ಸಂಜೆ ಸುರಿದ ಮಳೆಗೆ ಚಿಂಚೋಳಿ ತಾಲ್ಲೂಕಿನ ಬೆನಕನ ಹಳ್ಳಿ ಗ್ರಾಮದಲ್ಲಿ ಭಾರೀ ಮಳೆಯಿಂದ ಮನೆಗಳಿಗೆ ನೀರು ನುಗ್ಗಿದೆ.

ಇದನ್ನೂ ಸಹ ಓದಿ: ಗ್ಯಾರೆಂಟಿ ಯೋಜನೆ ಮಾದರಿಯಲ್ಲೇ ಹೊಸ ಯೋಜನೆಗೆ ಪ್ಲಾನ್..!‌ ವೈದ್ಯರನ್ನು ಮನೆ ಬಾಗಿಲಿಗೆ ಕರೆಸಿ ತಪಾಸಣೆ

ಮಳೆಗಾಗಿ ವಿಜ್ಞಾನದ ಮೊರೆ ಹೋದ ರಾಜ್ಯದ ಜನತೆ. ಹಾವೇರಿಯಲ್ಲಿ ಮೊಡ ಬಿತ್ತನೆ ಮಾಡಲಾಗಿದೆ. ಈ ನಡುವೆ ರಾಣೆಬೆನ್ನೂರು ಶಾಸಕ ಪ್ರಕಾಶ್‌ ಕೋಳಿವಾಡ ಮೋಡ ಬಿತ್ತನೆ ಮಾಡುತ್ತಾ ಇದ್ದಾರೆ. ನಿನ್ನೆಯಿಂದ ಹಾವೇರಿಯಲ್ಲಿ ಮೋಡ ಬಿತ್ತನೆ ಕಾರ್ಯ ಶುರುವಾಗಿದೆ. ಸಚಿನ ಹೆಚ್‌ ಕೆ ಪಾಟೀಲ್‌ ಮೋಡ ಬಿತ್ತನೆಗೆ ಚಾಲನೆ ನೀಡಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಸಕ ಪ್ರಕಾಶ ಕೋಳಿವಾಡ ಬರಗಾಲ ಛಾಯೆಯ ಬಗ್ಗೆ ಹವಾಮಾನ ವರದಿ ಮುನ್ಸೂಚನೆ ನೀಡಿತ್ತು. ಭೂ ವಿಜ್ಞಾನ ಸಂಸ್ಥೆ ಸಾಕಷ್ಟು ರಿಸರ್ಚ್‌ ಮಾಡಿತ್ತು. ಮಳೆ ಬರುವುದು ಖಚಿತ ಎನ್ನುವ ಮಾಹಿತಿಯಿಂದ ಮೋಡ ಬಿತ್ತನೆ ಮಾಡಲಾಗಿದೆ. ರಾಣೆ ಬೆನ್ನೂರು ಕ್ಷೇತ್ರದ ರೈತರು ಅವಶ್ಯಕತೆ ಇದೆ ಎಂದು ಹೇಳಿದ್ದಾರೆ. ಹೀಗಾಗಿ ಮೋಡ ಬಿತ್ತೆನೆ ಮಾಡಿದ್ದೇವೆ ಎಂದರು.

ರಾಜ್ಯದಲ್ಲಿ ಶೇ.26 ರಷ್ಟು ಮಳೆ ಕೊರತೆ 134 ತಾಲ್ಲೂಕುಗಳಲ್ಲಿ ಬರ ಆವರಿಸಿದೆ. ಇನ್ನೂ ರಾಜ್ಯದಲ್ಲಿ ಮುಂಗಾರು ಕೈ ಕೊಟ್ಟಿದೆ. ಜೂನ್‌ ಆಗಸ್ಟ್‌ ತಿಂಗಳಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಕರ್ನಾಟಕದಲ್ಲಿ ಶೇ 26 ರಷ್ಟು ಮಳೆ ಕೊರತೆಯಾಗಿದೆ. 134 ತಾಲ್ಲೂಕುಗಳಿಗೆ ಬರ ಘೋಷಣೆಗೆ ಸರ್ಕಾರ ಮುಂದಾಗಿದೆ. ಮುಂದಿನ ದಿನಗಳಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ರೈತರಿಗೆ ಮೇವು ಬಿತ್ತನೆ ಕಿಟ್‌ ವಿತರಣೆ ಕ್ರಮ ಕೈಗೊಳ್ಳುವುದಾಗಿ ತಿಳಿಸಲಾಗಿದೆ.

ಇತರೆ ವಿಷಯಗಳು:

ಅಕಾಲಿಕ ಮಳೆಗೆ ತತ್ತರಿಸಿದ ರಾಜ್ಯ..! ಸರ್ಕಾರದಿಂದ ಬರಪೀಡಿತ ಜಿಲ್ಲೆಗಳ ಹೆಸರು ಬಿಡುಗಡೆ; ಈ ಜಿಲ್ಲೆಯ ರೈತರಿಗೆ ಪರಿಹಾರ ಘೋಷಣೆ

ಇನ್ಮುಂದೆ ಬ್ಯಾಂಕ್‌ ಗ್ರಾಹಕರಿಗೆ ಕಾದಿದೆ ಬಿಗ್‌ ಶಾಕ್‌..! ತಮ್ಮ ಖಾತೆಯಲ್ಲಿನ ಕನಿಷ್ಠ ಮೊತ್ತಕ್ಕೆ ಲಿಮಿಟ್‌ ಫಿಕ್ಸ್‌! ಗ್ರಾಹಕರ ಆಕ್ರೋಶ

Leave A Reply

Your email address will not be published.