ಬೆಂಗಳೂರು ಬಂದ್ ಭದ್ರತೆಗಾಗಿ ಬಂದ ಪೊಲೀಸ್ ಸಿಬ್ಬಂದಿಗೆ ಸತ್ತ ಇಲಿಯ ಊಟ ಕೊಟ್ಟ ಸರ್ಕಾರ
ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುವುದನ್ನು ವಿರೋಧಿಸಿ ನಡೆಸುತ್ತಿರುವ ಬೆಂಗಳೂರು ಬಂದ್ ಹೋರಾಟಕ್ಕೆ ಆಯೋಜಿಸಿದ ಪೋಲಿಸ್ ಸಿಬ್ಬಂದಿಗಳಿಗೆ ಸರಬರಾಜು ಮಾಡಿದ ಊಟದಲ್ಲಿ ಸತ್ತ ಇಲಿ ಕಂಡುಬಂದಿದೆ ಎಂದು ದೂರು ನೀಡಲಾಗಿದೆ.
ಕನ್ನಡ ಪರ ಸಂಘಟನೆಗಳು ಮತ್ತು ರೈತಪರ ಸಂಘಟನೆಗಳಿಂದ ಕಾವೇರಿ ನೀರಿನ ಹರಿವಿನ ವಿರುದ್ಧ ಬೆಂಗಳೂರು ಬಂದ್ ನಡೆಸಲಾಗುತ್ತಿದೆ. ಇದಕ್ಕೆ ಸರ್ಕಾರ ಒಪ್ಪಿಗೆ ನೀಡದಿದ್ದರೂ ಬಂದ್ ನೆಡೆಸಲಾಗುತ್ತಿದೆ. ಬೆಂಗಳೂರು ಮತ್ತು ಅನೇಕ ಹೊರ ಜಿಲ್ಲೆಗಳಿಂದ ಪೋಲಿಸ್ ಸಿಬ್ವಂದಿಯನ್ನು ನಿಯೋಜಿಸಲಾಗಿತ್ತು. ಆದರೆ ಆ ಪೋಲಿಸು ಸಿಬ್ಬಂದಿಗೆ ಇಲಿಯ ಊಟವನ್ನು ವಿತರಿಸಲಾಗಿದೆ. ಇದರ ವಿರುದ್ಧ ಸಿಬ್ಬಂದಿಗಳು ಕಿಡಿಕಾರಿದ್ದಾರೆ. ಬಂದ್ ಗಾಗಿ ನಿಯೋಜಿಸಿದ್ದ ಪೋಲಿಸ್ ಸಿಬ್ಬಂದಿಯ ಊಟದಲ್ಲಿ ಸತ್ತಿರುವ ಇಲಿ ಪತ್ತೆಯಾಗಿದ್ದೂ ಅದನ್ನು ಸಾರ್ವಜನಿಕಗೊಳಿಸದಂತೆ ಹೇಳಲಾಯಿತು ಎಂದು ಸುದ್ದಿಯಾಗುತ್ತಿದೆ.
ಇದನ್ನೂ ಓದಿ: ಹಸು ಖರೀದಿ ಸಬ್ಸಿಡಿ ನಿಯಮ ಚೇಂಜ್..! ಈ ವರ್ಗದ ಜನರಿಗೆ 50% ನಿಂದ 75% ವರೆಗೆ ಸಬ್ಸಿಡಿ ಆಫರ್
RMC Yard ಪೊಲೀಸರಿಗೆ ನೀಡಿದ ಊಟದಲ್ಲಿ ಇಲಿ: ಪೋಲಿಸ್ ಇಲಾಖೆ ಸಿಬ್ಬಂದಿಗಳಿಗೆ ಸರಬರಾಜು ಮಾಡಿದ ಊಟದಲ್ಲಿ ಇಲಿ ಕಂಡು ಪೊಲೀಸ್‌ರು ಕಿಡಿಕಾರಿದ್ದಾರೆ. ಊಟದಲ್ಲಿ ಸಿಕ್ಕ ಇಲಿಯ ಪೋಟೋ ಲಭ್ಯವಾಗಿದ್ದೂ. ಇಂದು RMC Yard ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಂಗಳೂರು ಬಂದ್ ಹಿನ್ನೆಲೆಯಲ್ಲಿ ಭದ್ರತೆಗೆ ಆಯೋಜಿಸಲಾಗಿದ್ದ ಪೊಲೀಸರಿಗೆ ಸರಬರಾಜು ಮಾಡಿದ ಬೆಳಗ್ಗಿನ ತಿಂಡಿ ತೆರೆಯುತ್ತಿದ್ದಂತೆ ಸತ್ತು ಹೋಗಿರುವ ಇಲಿ ಕಂಡುಬಂದಿದೆ.
ಪೋಲಿಸ್ ಕಮಿಷನರ್ ವಿರುದ್ಧ ಸಿಬ್ಬಂದಿ ಆಕ್ರೋಶ: ಹೋಟೆಲ್ ನಿಂದ ಕಳಪೆ ಮಟ್ಟದ ಊಟ ಪೂರೈಕೆ ಮಾಡಿದ್ದಾರೆ ಎಂದು ಮಾಡಲಾಗಿದೆ ಎನ್ನಲಾಗುತ್ತಿದೆ. ಪೊಲೀಸ್ ಆಯುಕ್ತರಲ್ಲಿ ಸಿಬ್ಬಂದಿ ವರ್ಗದವರು ನಾವು ತನ್ನುವ ಊಟದ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಪೊಲೀಸರು ಮನವಿ ಮಾಡಿದ್ದಾರೆ. ಹಾಗೇ ನೀವು ಈ ರೀತಿಯ ಊಟ ಕೊಟ್ರೆ ತನ್ನುತ್ತೀರಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ಊಟ ಸೇವಿಸಿ ಆರೋಗ್ಯದಲ್ಲಿ ಹೆಚ್ಚು ಕಡಿಮೆಯಾದರೆ ನಮ್ಮ ಕುಟುಂಬಕ್ಕೆ ಯಾರು ಹೊಣೆ ಎಂದು ಅಸಮಧಾನ ಹೊರಹಾಕಿದ್ದಾರೆ.
ಇತರೆ ವಿಷಯಗಳು:
ಡ್ರೈವಿಂಗ್ ಲೈಸೆನ್ಸ್ ಮಾಡಿಸೋಕೆ ಇನ್ಮುಂದೆ ಹೊಸ ದಾಖಲೆ; ಹೇಗೆ ಅಪ್ಲೇ ಮಾಡಬೇಕು ಇಲ್ಲಿ ನೋಡಿ
ಅಕ್ಟೋಬರ್ 1 ರಿಂದ ಹೊಸ ನಿಯಮ: ಆಧಾರ್-ಪ್ಯಾನ್, ಪಾಸ್‌ಪೋರ್ಟ್ ಮಾಡಲು ಈಗ ಈ ಡಾಕ್ಯುಮೆಂಟ್ ಬೇಕೇ ಬೇಕು