ಆಗಸ್ಟ್ ತಿಂಗಳಲ್ಲಿ ಅನ್ನಭಾಗ್ಯ ಹಣ ಬಂದಿರೋ ಮೆಸೇಜ್ ಬರಲ್ಲ..! ಹೇಗೆ ಚೆಕ್ ಮಾಡುವುದು? ಇಲ್ಲಿ ನೋಡಿ
ಹಲೋ ಸ್ನೇಹಿತರೆ, ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮಾಡಿರುವ 5 ಗ್ಯಾರೆಂಟಿ ಯೋಜನೆಗಳಲ್ಲಿ ಒಂದಾಗಿರುವ ಅನ್ನಭಾಗ್ಯ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸುತ್ತೇವೆ. ಈ ಯೋಜನೆಯಡಿ ಎಲ್ಲಾ ಫಲಾನುಭವಿಗಳಿಗೆ ಖಾತೆಗೆ 5 ಕೆಜಿ ಅಕ್ಕಿ ಬದಲು ಹಣ ನೀಡಲು ಘೋಷಿಸಿತ್ತು. ಹಾಗೆಯೇ ಜುಲೈ ತಿಂಗಳಿನಲ್ಲಿ ಎಲ್ಲರ ಖಾತೆಗೆ ಹಣ ವರ್ಗಾವಣೆ ಮಾಡಲಾಗಿತ್ತು. ಆಗಸ್ಟ್ ತಿಂಗಳಲ್ಲಿ ಯಾವುದೇ ಬರುವುದಿಲ್ಲ. ಹಾಗಾದರೆ ಹಣ ಜಮಾ ಆಗಿದೆಯೋ ಇಲ್ಲವೋ ಎಂದು ಹೇಗೆ ಚೆಕ್ ಮಾಡವುದು? ಎಂದು ತಿಳಿಸಲಾಗಿದೆ ಈ ಲೇಖನವನ್ನು ಕೊನೆವರೆಗೂ ಓದಿ.
ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ, ಕರ್ನಾಟಕ ಕಾಂಗ್ರೆಸ್ ತನ್ನ ಮೂರನೇ ಭರವಸೆಯನ್ನು ಶುಕ್ರವಾರದಂದು ವಾಗ್ದಾನ ಮಾಡಿತು, ಬಡತನ ರೇಖೆಗಿಂತ ಕೆಳಗಿರುವ ಕಾರ್ಡ್ ಹೊಂದಿರುವವರಿಗೆ ಪ್ರತಿ ತಿಂಗಳು 10 ಕೆಜಿ ಉಚಿತ ಅಕ್ಕಿಯನ್ನು ನೀಡುತ್ತದೆ. ಅಕ್ಕಿದೊರೆಯದ ಕಾರಣ ಹಣ ನೀಡುತ್ತೇವೆ ಎಂದು ಹೇಳಿತ್ತು.
ಕರ್ನಾಟಕ ಅನ್ನ ಭಾಗ್ಯ ಯೋಜನೆ
ಯೋಜನೆಯ ಹೆಸರು | ಕರ್ನಾಟಕ ಅನ್ನ ಭಾಗ್ಯ ಯೋಜನೆ |
ಮೂಲಕ ಪ್ರಾರಂಭಿಸಲಾಗಿದೆ | ಕಾಂಗ್ರೆಸ್ ಪಕ್ಷ |
ರಾಜ್ಯ | ಕರ್ನಾಟಕ |
ಪ್ರಯೋಜನಗಳು | ಪ್ರತಿ ವ್ಯಕ್ತಿಗೆ ತಿಂಗಳಿಗೆ 10 ಕೆಜಿ ಅಕ್ಕಿ |
ಫಲಾನುಭವಿಗಳು | BPL ಅಂದರೆ, ಬಡತನ ರೇಖೆಗಿಂತ ಕೆಳಗಿರುವ ಮತ್ತು ಅನ್ನ ಅಂತ್ಯೋದಯ ಕಾರ್ಡ್ ವರ್ಗದ ಕರ್ನಾಟಕದ ಕುಟುಂಬಗಳು |
ಅರ್ಜಿಯ ಪ್ರಕ್ರಿಯೆ | ಅಗತ್ಯವಿಲ್ಲ |
ನಿಮ್ಮ ಮೊಬೈಲ್ ನಲ್ಲಿ ಅನ್ನಭಾಗ್ಯ ಹಣ ಚೆಕ್ ಮಾಡುವ ವಿಧಾನ:
- ಮೊದಲನೆಯದಾಗಿ ನೀವು ಗೂಗಲ್ ಕ್ರೋಮ್ ನಲ್ಲಿ ahara.kar,nic ಎಂದು ಟೈಪ್ ಮಾಡಿ ನಂತರ ಆಹಾರ ನಾಗರಿಕ ಕಲ್ಯಾಣ ಇಲಾಖೆ ಮೇಲೆ ಕ್ಲಿಕ್ ಮಾಡಿ
- ವೆಬ್ ಸೈಟ್ ಪೇಜ್ ಓಪನ್ ಆಗತ್ತೆ. ನಂತರ ಇದರಲ್ಲಿ ಇ-ಸೇವಗಳು Option ಮೇಲೆ ಕ್ಲಿಕ್ ಮಾಡಬೇಕು
- ನಂತರ ಇ-ಪಡಿತರ ಚೀಟಿ ಇ- ಸ್ಥಿತಿ ಅಂತ ಇರತ್ತೆ ನೀವು ಈ ಸ್ಥಿತಿ ಮೇಲೆ ಕ್ಲಿಕ್ ಮಾಡಬೇಕು
- ನಂತರ ಡಿಬಿಟಿ ಸ್ಥಿತಿ ಮೇಲೆ ಕ್ಲಿಕ್ ಮಾಡಿ, ನಂತರ ನಿಮ್ಮ ಜಿಲ್ಲೆಯ ಹೆಸರು ಇದ್ದಲ್ಲಿ ಅ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು, ನಂತರ ಇನ್ನೊಂದು ಮುಖಪುಟ ತೆರೆಯುತ್ತದೆ. ಇದರಲ್ಲಿ ನೇರ ನಗದು ವರ್ಗಾವಣೆ ಸ್ಥಿತಿ ಮೇಲೆ ಕ್ಲಿಕ್ ಮಾಡಬೇಕು
- ನಂತರ ಅಲ್ಲಿ ನೀವು ಪ್ರಸ್ತುತ ತಿಂಗಳ ಹೆಸರನ್ನು Select ಮಾಡಬೇಕು.
- ನಂತರ ನೀವು ನಿಮ್ಮ ರೇಷನ್ ಕಾರ್ಡ್ RC ನಂಬರ್ ಅನ್ನು ನಮೂದಿಸಬೇಕು. ನಂತರ ಕೆಳಗೆ ನೀಡಿರುವ ಕಾಪ್ಚಾ ಕೋಡ್ ಅನ್ನು ನಮೂದಿಸಬೇಕು. ಅಲ್ಲಿ ನೀವು ಹಣ ನಿಮ್ಮ ಖಾತೆಗೆ ಬಂದಿರುವ ಸಂಪೂರ್ಣ ವಿವರವನ್ನು ನೋಡಬಹುದು.
ಇತರೆ ವಿಷಯಗಳು:
ರಾಜ್ಯಕ್ಕೆ ಮತ್ತೆ ಅಬ್ಬರಿಸಿದ ವರುಣಾರ್ಭಟ..! 4-5 ದಿನ ಈ ಡೇಂಜರ್ ಮಳೆ ನಿಲ್ಲಲ್ಲ; ಎಚ್ಚರಿಸಿದ ಹವಮಾನ ಇಲಾಖೆ