ಅನ್ನಭಾಗ್ಯದ ಹಣಕ್ಕೆ ಫುಲ್‌ಸ್ಟಾಪ್! ಮುಂದಿನ ತಿಂಗಳಿಂದ ಪ್ರತಿಯೊಬ್ಬರಿಗೂ 10 ಕೆಜಿ ಅಕ್ಕಿ! ಹೊಸ ಅರ್ಜಿದಾರರಿಗೂ ಸಿಗುತ್ತಾ ಉಚಿತ ಅಕ್ಕಿಯ ಲಾಭ?
ಹಲೋ ಸ್ನೇಹಿತರೆ, ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯಡಿ ಎಲ್ಲ ಕಾರ್ಡುದಾರರಿಗೆ 10 ಕೆಜಿ ವಿತರಣೆ ಮಾಡಲಾಗುವುದು ಎಂದು ಗ್ಯಾರೆಂಟಿ ಯೋಜನೆಯಲ್ಲಿ ತಿಳಿಸಿತ್ತು. ಅಕ್ಕಿ ಸಮರ್ಪಕವಾಗಿ ದೊರೆಯದ ಕಾರಣ ಅಕ್ಕಿ ಸಿಗುವ 5 ಕೆಜಿ ಅಕ್ಕಿ ಬದಲು ಹಣ ನೀಡಿತ್ತು. ಈಗಾಗಲೇ ಎಲ್ಲರಿಗೂ ಅಕ್ಕಿಯ ಹಣ ವರ್ಗಾವಣೆ ಮಾಡಲಾಗಿದೆ. ಈಗ ಸರ್ಕಾರವು ಮುಂದಿನ ತಿಂಗಳಿನಿಂದ ಅನ್ನಭಾಗ್ಯ ಯೋಜನೆ ಸಂಪೂರ್ಣ ಅಕ್ಕಿಯನ್ನು ಪೂರೈಸಲು ಮುಂದಾಗಿದೆ. ಹೆಚ್ಚಿನ ಮಾಹಿತಿ ತಿಳಿಯಲು ಈ ಲೇಖನವನ್ನು ಕೊನೆವರೆಗು ಓದಿ.
ಅನ್ನಭಾಗ್ಯ ಯೋಜನೆಯಡಿ ಜುಲೈ 10 ರಿಂದ ಫಲಾನುಭವಿಗಳಿಗೆ ಹೆಚ್ಚುವರಿ 5 ಕೆಜಿ ಅಕ್ಕಿ ಬದಲಿಗೆ ನಗದು ರೂಪದಲ್ಲಿ ಪಾವತಿಸಲಾಗುವುದು ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನೇರ ಲಾಭ ವರ್ಗಾವಣೆ ಪರಿಚಯಿಸುವುದರೊಂದಿಗೆ, ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರವು ಮೇ ತಿಂಗಳಲ್ಲಿ ಚುನಾವಣೆಗೆ ಮೊದಲು ಘೋಷಿಸಲಾದ ಐದು ಭರವಸೆಗಳಲ್ಲಿ ಇನ್ನೊಂದನ್ನು ಜಾರಿಗೆ ತರಲು ಪ್ರಾರಂಭಿಸಿದೆ.
ಚುನಾವಣೆ ವೇಳೆ ನೀಡಿದ್ದ ಭರವಸೆಗಳನ್ನು ಈಡೇರಿಸಲು ಆಗುತ್ತಿರುವ ತೊಂದರೆಗಳನ್ನು ಕಡೆಗಣಿಸಿ ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಅಕ್ಕಿ ಖರೀದಿಯಲ್ಲಿ ತೊಂದರೆಗಳಿದ್ದು, ಇದಕ್ಕಾಗಿ ಫಲಾನುಭವಿಗಳಿಗೆ ನಗದು ರೂಪದಲ್ಲಿ ಹಣ ನೀಡಲಾಗುವುದು ಎಂದು ಸರ್ಕಾರ ಹೇಳಿತ್ತು. ಈಗ ಹೆಚ್ಚುವರಿ ಅಕ್ಕಿಗೆ ಕೆಜಿಗೆ 34 ರೂಪಾಯಿ ನೀಡುವುದಾಗಿ ಸರ್ಕಾರ.
ಇದನ್ನೂ ಸಹ ಓದಿ: ಮಹಿಳೆಯರಿಗೆ ಮತ್ತೆ ನಿರಾಸೆ ಮೂಡಿಸಿದ ಕಾಂಗ್ರೆಸ್! ಆಗಸ್ಟ್‌ನಲ್ಲಿ ಬರಲ್ವಂತೆ ಗೃಹಲಕ್ಷ್ಮಿ ಹಣ; ಕಾರಣ ಏನು ಗೊತ್ತಾ?
ಈ ಯೋಜನೆಯು ಬಿಪಿಎಲ್ ಮತ್ತು ಅಂತ್ಯೋದಯ ಕುಟುಂಬದ ಎಲ್ಲ ಸದಸ್ಯರಿಗೆ ಅನ್ವಯಿಸುತ್ತದೆ. ರಾಜ್ಯ ಸರ್ಕಾರದ ಪ್ರಕಾರ, ಕರ್ನಾಟಕದಲ್ಲಿ ‘ಅಂತ್ಯೋದಯ ಅನ್ನ ಯೋಜನೆ ಮತ್ತು ಪರಿವಾರ’ದ 1.28 ಕೋಟಿ ಪಡಿತರ ಚೀಟಿಗಳಿವೆ.
ಮುಂದಿನ ತಿಂಗಳು ಅನ್ನಭಾಗ್ಯದ ಅಕ್ಕಿ ವಿತರಣೆ ಮಾಡುವುದಾಗಿ ಸಚಿವ ಕೆ ಹೆಚ್ ಮುನಿಯಪ್ಪ ಅವರು ಹೇಳಿಕೆ ಕೊಟ್ಟಿದ್ದಾರೆ. ಹೊಸದಾಗಿ BPL ಅರ್ಜಿ ಹಾಕೋರಿಗೆ ಅಕ್ಕಿಯನ್ನು ಕೊಡಲಾಗುತ್ತೆ ಆಂಧ್ರ, ತೆಲಂಗಾಣ ಸರ್ಕಾರ ಬಳಿ ಮನವಿ ಮಾಡಿಕೊಂಡಿದ್ದೀವಿ. ಒಂದು ವಾರ ಸಮಯವನ್ನು ಕೇಳಿದ್ದಾರೆ. ನೇರ ರಾಜ್ಯಗಳು ದರ ಹೇಳಿದ ಮೇಲೆ ನಾವು ತಿರ್ಮಾನ ಮಾಡುತ್ತೇವೆ ಎಂದು ಸಚಿವ ವಿಧಾನಸೌಧದಲ್ಲಿ ಹೇಳಿಕೆ ನೀಡಿದ್ದಾರೆ.
ಇತರೆ ವಿಷಯಗಳು:
ಗೃಹಜ್ಯೋತಿ ಹೊಸ ಅಪ್ಡೇಟ್! ಬಾಡಿಗೆದಾರರಿಗೆ ಉಚಿತ ವಿದ್ಯುತ್ ನಿರಾಕರಣೆ; ಆಗಸ್ಟ್ ತಿಂಗಳಲ್ಲಿ ಸಿಗಲ್ಲ ಫ್ರೀ ಕರೆಂಟ್