ಬಾರದ ಮಳೆ ಅನ್ನದಾತರಿಗೆ ಕೈ ಕೊಟ್ಟ ಬೆಳೆ..! ಬೆಳೆ ಪರಿಹಾರ ಆರಂಭ; ಹೀಗೆ ಅರ್ಜಿ ಸಲ್ಲಿಸಿ ಪರಿಹಾರ ಪಡೆಯಿರಿ
ಹಲೋ ಸ್ನೇಹಿತರೆ, ರಾಜ್ಯದಲ್ಲಿ ಈ ಬಾರಿ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗಿಲ್ಲ ಈ ತಿಂಗಳು ಒಂದು ಹನಿಯೂ ಕೂಡ ಮಳೆಯಾಗಿಲ್ಲ ಹೀಗಿರುವಾಗ ಹಲವು ಕಡೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಬರಗಾಲದ ಜಿಲ್ಲೆಗಳು ಎಂದು ಘೋಷಣೆ ಮಾಡಬೇಕು ಎನ್ನುವ ಒತ್ತಾಯ ಕೇಳಿಬರುತ್ತಾ ಇದೆ. ಈ ಹಿನ್ನಲೆಯಲ್ಲಿ ಸರ್ಕಾರ ಬೆಳೆ ಪರಿಹಾರ ಪಡೆಯಲು ರೈತರಿಗಾಗಿ ಅರ್ಜಿ ಆರಂಭ ಮಾಡಿದೆ. ಹೇಗೆ ಅರ್ಜಿ ಸಲ್ಲಿಸಬೇಕು? ಅಗತ್ಯ ದಾಖಲೆಗಳೇನು? ಈ ಎಲ್ಲಾ ಮಾಹಿತಿಯ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ.
ರೈತರು ಆಕಾಶವನ್ನೇ ಕಾಯುತ್ತಾ ಇರುವಂತಾಗಿದೆ. ಬಾರದ ಮುಂಗಾರು ಮಳೆ ರೈತನಿಗೆ ಕೈ ಕೊಟ್ಟ ಬೆಳೆ ಬಾಡಿ ಹೋದ ರಾಗಿ ಪೈರು ಮಕ್ಕೆಜೋಳ ಹಚ್ಚ ಹಸಿರಾಗಿ ನಳನಳಿಸಬೇಕಾದ ರಾಗಿ. ಮೆಕ್ಕೆಜೋಳ ಎಲ್ಲವೂ ಕೂಡ ಬಿಸಿಲಿನ ತಾಪಕ್ಕೆ ಬಾಡಿ ಬಳಲಿ ಹೋಗಿದೆ. ಕಳೆದ 3 ವರ್ಷಗಳಿಂದ ಉತ್ತಮ ಮಳೆ ಕಂಡಿದ್ದ ರಾಜ್ಯ ಈ ಬಾರಿ ಮಳೆ ಅನ್ನೋದು ಅಷ್ಟಾಗಿ ಇಲ್ಲ. ಇಡೀ ಜಿಲ್ಲೆಯಲ್ಲಿ ಬರದ ವಾತಾವರಣ ಆವರಿಸಿದೆ.
ಇದನ್ನೂ ಸಹ ಓದಿ: Jio ರಕ್ಷಾಬಂಧನ ಬೆಂಕಿ ಆಫರ್..! 30-31st ಆಗಸ್ಟ್ ಎರಡು ದಿನ ಮಾತ್ರ ಅವಕಾಶ, ವರ್ಷವಿಡಿ ಪಡೆಯಿರಿ 2.5 GB ಫ್ರೀ ಡೇಟಾ
ಎಲ್ಲಿ ನೋಡಿದರು ಮಳೆ ಇಲ್ಲದೆ ಬೆಳೆಗಳೆಲ್ಲವೂ ಕೂಡ ಬಳಲಿ ಬೆಂಡಾಗಿ ಸೋರಗಿ ಹೋಗಿವೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ, ಗೌರಿಬಿದನೂರು, ಚಿಂತಾಮಣಿ, ಸೇರಿದಂತೆ ಯಾವುದೇ ತಾಲ್ಲೂಕಿನಲ್ಲೂ ವಾಡಿಕೆ ಪ್ರಮಾಣದ ಕನಿಷ್ಠ ಮಳೆ ಕೂಡ ಆಗಿಲ್ಲ ಮಳೆಯನೇ ನೆಚ್ಚಿಕೊಂಡು ರೈತರು ಬೆಳೆದಿದ್ದ ರಾಗಿ ಮೆಕ್ಕೆಜೋಳ ಅವರೆ ನೆಲಗಡಲೆ ಎಲ್ಲವೂ ಈಗ ಬಿಸಿಲಿನ ತಾಪಕ್ಕೆ ಸಂಪೂರ್ಣವಾಗಿ ಬಳಲಿ ಬೆಂಡಾಗಿವೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಳೆಯನ್ನೇ ನೆಚ್ಚಿಕೊಂಡು ರಾಗಿ ಮೆಕ್ಕೆಜೋಳ ಅವರೆ ನೆಲಗಡಲೆಯನ್ನು ಎತೇಚ್ಚವಾಗಿ ಬೆಳೆಯುತ್ತಾರೆ. ಜೂನ್ ಜುಲೈ ತಿಂಗಳಲ್ಲಿ ಬಿತ್ತನೆ ಆರಂಭವಾದರೆ, ಆಗಸ್ಟ್ ತಿಂಗಳ ಅಂತ್ಯಕ್ಕೆ ಬಿತ್ತನೆ ಕಾರ್ಯ ಸಂಪೂರ್ಣವಾಗಿ ಮುಗಿದುಹೋಗತ್ತೆ. ಆದರೆ ಈ ಸಲ ಆಗಸ್ಟ ತಿಂಗಳ ಅಂತ್ಯ ಬಂದ್ರು ನಿರೀಕ್ಷಿತ ಪ್ರಮಾಣದ ಮಳೆ ಆಗಿಲ್ಲ. ಆರಂಭದಲ್ಲಾದ ಮಳೆಯಿಂದ ಬಿತ್ತನೆ ಮಾಡಿರುವ ರಾಗಿ, ಮೆಕ್ಕೆಜೋಳ ಎಲ್ಲವೂ ಕೂಡ ಮೊಳಕೆ ಒಡೆದಿದ್ದರು ಈಗ ಮಳೆ ಇಲ್ಲದೆ ಎಲ್ಲವೂ ಬಾಡಿ ಹೋಗುತ್ತಾ ಇವೆ.
ರಾಜ್ಯ ಸರ್ಕಾರ ಬರಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಬೇಕು ಎಂದು ರೈತರ ಸಂಘದ ಮುಖಂಡರು ಆಗ್ರಹಿಸಿದ್ದಾರೆ.
ಇತರೆ ವಿಷಯಗಳು:
ರಕ್ಷಾಬಂಧನ ದಿನ ರೈತರಿಗೆ ಉಡುಗೊರೆ: ಪಿಎಂ ಕಿಸಾನ್ ಹಣ ಹೆಚ್ಚಳ, ಈಗ 15 ನೇ ಕಂತಿನ ಎಷ್ಟು ಸಾವಿರ ಸಿಗತ್ತೆ ಇಲ್ಲಿ ನೋಡಿ
ನಾಲ್ಕನೇ ಗ್ಯಾರಂಟಿ ಭರ್ಜರಿ ಉದ್ಘಾಟನೆ..! ಮದ್ಯಾಹ್ನ 2 ಗಂಟೆಗೆ ಹಣ ಜಮಾ; ಈ ಬಟನ್ ಒತ್ತಿದರೆ ಮಹಿಳೆಯರ ಖಾತೆಗೆ ಹಣ