ಗಣೇಶೋತ್ಸವ ರ‍್ಯಾಲಿ ಧ್ವನಿವರ್ಧಕ (DJ) ಬಳಕೆಗೆ ನೂರೆಂಟು ರೂಲ್ಸ್..! ಪಾಲಿಕೆ ವಿರುದ್ಧ ಸಮಿತಿ ಕಿಡಿ
ಹಲೋ ಸ್ನೇಹಿತರೆ, ರಾಜ್ಯಾದ್ಯಂತ ಎಲ್ಲಿ ನೋಡಿದರು ಸಿದ್ಧತೆ ನಡೆಯುತ್ತಿದೆ. ಗಣೇಶೋತ್ಸವಕ್ಕೆ ರಾಜ್ಯಾದ್ಯಂತ ಸಜ್ಜು ಆದರೆ ಸಾರ್ವಜನಿಕವಾಗಿ ಗಣೇಶೋತ್ಸವ ಮಾಡುವವರಿಗೆ ಪಾಲಿಕೆ ಮತ್ತು ಮಾಲಿನ್ಯ ಮಂಡಳಿ ಕೆಲವೊಂದು ಷರತ್ತುಗಳನ್ನು ವಿಧಿಸಿದೆ. ಪ್ರತಿಯೊಂದಕ್ಕೂ ರೂಲ್ಸ್ ರೂಲ್ಸ್ ಎಂದು ಸಮಿತಿಗಳು ಅನುಮತಿ ಪಡೆಯುವುದು ಕಷ್ಟವಾಗಿದೆ. ಯಾವ ಯಾವ ರೂಲ್ಸ್‌ಗಳನ್ನು ಸರ್ಕಾರ ಹಾಕಿದೆ? ಹೊಸದಾಗಿ ಮತ್ತೆ ಸೇರ್ಪಡೆ ಮಾಡಲಾಗಿದೆಯಾ? ಈ ಮಾಹಿತಿಯ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ.
ಗಣೇಶೋತ್ಸವ ರ‍್ಯಾಲಿಗೆ ಧ್ವನಿವರ್ಧಕ ಬಳಕೆಗೆ ನೂರೆಂಟು ರೂಲ್ಸ್. ಪಾಲಿಕೆ ಮಾಲಿನ್ಯ ನಿಯಂತ್ರಣ ಮಂಡಳಿ ವಿರುದ್ದ ಗಣೇಶೋತ್ಸವ ಸಮಿತಿ ಕಿಡಿ. ಸಿಲಿಕಾನ್ ಸಿಟಿ ಗಣೇಶೋತ್ಸವ ಮೆರವಣಿಗೆ ಸಜ್ಜಾಗಿದೆ. ಗಲ್ಲಿ ಗಲ್ಲಿಯಲ್ಲಿ ಗಣಪನ ಹವಾ ಶುರುವಾಗುತ್ತಾ ಇದೆ. ಇದರ ಮಧ್ಯ ಈಗ ಈ ಬಾರಿ ಪಿಒಪಿ ಗಣಪನ ಬಳಕೆಗೆ ಸಂಪೂರ್ಣ ನಿಷೇಧ ಹೇರಲಾಗಿದೆ. ಆದರೆ ಗಣಪತಿ ಮೆರವಣಿಗೆ ವೇಳೆ ರ‍್ಯಾಲಿ ನಡೆಸುವ ವಿಸರ್ಜನಾ ನಡೆಸುವಾಗ ಹಾಗೂ ಧ್ವನಿವರ್ಧಕ ಬಳಕೆ ಪೆಂಡಾಲ್ ಹಾಕಲು ನೂರೆಂಟು ರೂಲ್ಸ್ ಇದೆ. ಸುಖಾ ಸುಮ್ಮನೆ ಗಣೇಶೋತ್ಸವ ಅನುಮತಿಗೆ ಕಿರಿಕಿರಿ ಉಂಟಾಗುತ್ತಿದೆ ಎಂದು ಗಣೇಶೋತ್ಸವ ಸಮಿತಿ ಆರೋಪಿಸಿದೆ.
ಯಾವ ಹಬ್ಬಕ್ಕೂ ಇರದ ಸಮಸ್ಯೆ ಗಣೇಶ ಹಬ್ಬಕ್ಕೆ ಮಾಡ್ತಾರೆ ಧ್ವನಿವರ್ಧಕ ಬಳಕೆಗೆ ಶಬ್ಧ ಮಾಲಿನ್ಯದ ನೆಪ ಒಡ್ಡುತ್ತಾರೆ. ರ‍್ಯಾಲಿ ಗೂ ಸರಿಯಾಗಿ ಅನುಮತಿ ಕೊಡಲ್ಲ ಇನ್ನು ವಿಸರ್ಜನಾ ವೇಳೆಯೂ ನಿರ್ವಹಣೇ ಸರಿಯಾಗಿ ಮಾಡುವುದಿಲ್ಲ ಎಂದು ಸಮಿತಿ ಕಿಡಿಕಾರಿದೆ. ಪ್ರತಿ ವರ್ಷ ಗಣೇಶೋತ್ಸವ ಆಚರಿಸುವ ಸಮಿತಿಗೆ 3 ವರ್ಷಕ್ಕೊಮ್ಮೆ ಒಪ್ಪಿಗೆ ಪಡೆಯುವ ರೀತಿ ರೂಲ್ಸ್ ಬರಲಿ ಎಂದು ಮನವಿ ಮಾಡಿದ್ದಾರೆ.
ಗಣೇಶೋತ್ಸವ ಸಂಭ್ರಮಕ್ಕೆ ರೂಲ್ಸ್ ಗಳು ಅಡ್ಡಿಯಾಗುತ್ತಾ ಇದೆ ಎಂಬುದು ಸಮಿತಿ ಆರೋಪ ಆದರೆ ಹಬ್ಬವನ್ನು ಅಚ್ಚುಕಟ್ಟಾಗಿ ಯಾವುದೇ ಗಲಭೆ ಇಲ್ಲದೆ ಶಾಂತಿಯುತವಾಗಿ ನೆಡೆಸೋಕೆ ನಾವು ಪ್ರಯತ್ನ ಪಡುತ್ತೇವೆ ಎಂಬುದು ಪಾಲಿಕೆ ಮತ್ತು ಪೋಲಿಸರ ವಾದ.
ಇತರೆ ವಿಷಯಗಳು:
PM ಕಿಸಾನ್ ಫಲಾನುಭವಿಗಳಿಗೆ ಬಂದಿದೆ ಗುಡ್ ನ್ಯೂಸ್.! ₹4000 ಖಾತೆಗೆ ಜಮಾ; ತಕ್ಷಣ ಅರ್ಜಿ ಸ್ಟೇಟಸ್ ಚೆಕ್ ಮಾಡಿ