ಗೃಹಿಣಿಯರಿಗೆ ಈರುಳ್ಳಿ ಬೆಳ್ಳುಳ್ಳಿ ಟೆನ್ಷನ್! ತರಕಾರಿ ರೇಟ್ ಇಳಿಕೆ ಅಂತ ಸ್ವಲ್ಪ ಆರಾಮಾದ್ರೆ ಎಚ್ಚೆತ್ತುಕೊಳ್ಳಿ, ₹200 ರ ಗಡಿ ದಾಟಿದೆ ಬೆಳ್ಳುಳ್ಳಿ ಬೆಲೆ
ಹಲೋ ಸ್ನೇಹಿತರೆ, ಕಿಚನ್ ಕ್ವೀನ್ ಟಮೊಟೊ 250 ರೂ ತನಕ ಕೂಡ ತನ್ನ ರೇಟನ್ನು ಹೆಚ್ಚಿಸಿಕೊಂಡಿತ್ತು. ದಾಖಲೆಯಾಗಿತ್ತು ಹಾಗೆಯೇ ಕಳೆದ 4-5 ದಿನಗಳಿಂದ ಬೆಲೆ ಕಡಿಮೆಯಾಗಿದೆ. ಇನ್ನೇನು ಬೆಲೆ ಕಡಿಮೆಯಾಯ್ತು ಅನ್ನುವಷ್ಟರಲ್ಲಿ ಆ ಜಾಗಕ್ಕೆ ಈಗ ಬೆಳ್ಳುಳ್ಳಿ ಸೇರಿದಂತೆ ಬಾಳೆಹಣ್ಣು ಕೂಡ ಬಂದು ನಿಂತಿದೆ. ಬೆಳ್ಳುಳ್ಳಿ ಖರೀದಿಸೋದೆ ಈಗ ಕಷ್ಟವಾಗಿದೆ. ಎಷ್ಟು ಬೆಲೆ ಏರಿಕೆಯಾಗಿದೆ. ಕಡಿಮೆಯಾಗೋದೆ ಇಲ್ವಾ? ಇನ್ನೂ ಜಾಸ್ತಿಯಾಗತ್ತಾ? ಈ ಎಲ್ಲಾ ಮಾಹಿತಿಯ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ.
ಗೃಹಿಣಿಯರಿಗೆ ಈರುಳ್ಳಿ ಬೆಳ್ಳುಳ್ಳಿ ಟೆನ್ಷನ್ 200 ರೂ ಗಡಿ ದಾಟಿದ ಬೆಳ್ಳುಳ್ಳಿ ಬೆಲೆ. ಒಂದು ಕಡೆ ಶತಕ ಬಾರಿಸಿದ ಬಾಳೆಹಣ್ಣು 100 ರೂ ಬ್ಯಾಗ್ ತುಂಬಾ ತರಕಾರಿ ಸಿಕ್ತಾ ಇತ್ತು ಆದ್ರೆ ಅಂತ ಹೇಳುತ್ತಾ ಇರೋದನ್ನಾ ಕೇಳ್ತಿದ್ವೀ, ಆದರೆ ಈಗ ಸಾವಿರ ರೂ ಕೊಟ್ರೂ ಅರ್ಧ ಚೀಲನು ತುಂಬದೇ ಇರೋ ಹಾಗೇ ಆಗಿದೆ. ಟೊಮೆಟೋ ಆಯ್ತು ಈಗ ಬೆಳ್ಳುಳ್ಳಿ, ಬಾಳೆಹಣ್ಣು ಈಗ ಈರುಳ್ಳಿ ಸರದಿ ಮಳೆಯಿಂದಾಗಿ ಈರುಳ್ಳಿ ಹಾಗೂ ಬೆಳ್ಳುಳ್ಳಿ ಪೂರೈಕೆಯಲ್ಲಿ ಕೊರತೆ ಉಂಟಾಗಿದೆ. ಬೆಳ್ಳುಳ್ಳಿ ಕೆಜಿ ಗೆ KR ಮಾರ್ಕೆಟ್ ನಲ್ಲಿ 200 ರಿಂದ 300 ರೂ ಇದೆ. 10 ರಿಂದ 15 ರೂ ಇದ್ದ ಈರುಳ್ಳಿ ಈಗ ಕೆಜಿಗೆ 35 ರಿಂದ 40 ರೂ ಆಗಿದೆ. ಇದರಿಂದ ಈರುಳ್ಳಿ ಬೆಳ್ಳುಳ್ಳಿ ಗ್ರಾಹಕರು ಜೇಬೆಲ್ಲ ಸುಡುತ್ತಾ ಇದೆ.
ಇನ್ನೂ ತಮಿಳನಾಡಿಯಿಂದ ಬಾಳೆಹಣ್ಣು ಕರ್ನಾಟಕಕ್ಕೆ ಅಷ್ಟಾಗಿ ಬರುತ್ತಿಲ್ಲ. ಜೊತೆಗೆ ಶ್ರಾವಣ ಮಾಸ ಆರಂಭವಾಗಿರುವ ಸಂದರ್ಭದಲ್ಲಿ ಓಣಂ ವರಮಹಾಲಕ್ಷ್ಮೀ ಗಣೇಶ ಚರ್ತುಥಿ ಹಿನ್ನಲೆಯಲ್ಲಿ ಬಾಳೆಹಣ್ಣಿನ ಪೂರೈಕೆ ವ್ಯತ್ಯಯ ವಾಗುತ್ತಾ ಇದೆ. ಹೀಗಾಹಿ ಏಲಕ್ಕಿ ಬಾಳೆಹಣ್ಣು ಕೆಜಿಗೆ 120 ರಿಂದ 130 ರೂ ಆಗಿದೆ. ಪಚ್ಚ ಬಾಳೆ ರಸ ಬಾಳೆಗಳ ದರ ಕೂ ಏರಿಕೆಯಾಗಿದೆ.
ಇನ್ನೂ ಹೂವುಗಳ ಬೆಲೆಯೂ ಕಳೆದ 304 ದಿನದಿಂದ ಹೆಚ್ಚಾಗುತ್ತಾ ಇದ್ದೂ ಏರಿಕೆಯಾಗುತ್ತಿದ್ದೂ ಮಲ್ಲಿಗೆ ಹೂವು ಕೆಜಿಗೆ 500 ರೂ ಇದ್ದರೆ ಕನಕಾಂಬರಿ ಕೆಜಿಗೆ 500 ರೂ ಇದೆ ಸೇವಂತಿಗೆ ಕೆಜಿಗೆ 200 ರೂ ಗುಲಾಬಿ ಕೆಜಿಗೆ 200 ರೂ ಹಾಗೂ ಮಲ್ಲಿಗೆ ಒಂದು ಹಾರಕ್ಕೆ 350 ಆಗಿದೆ ಒಟ್ಟಿನಲ್ಲಿ ಹಬ್ಬಗಳು ಹತ್ತಿರ ಬಂದತೆ ಇನ್ನೂ ದರ ಏರಿಕೆಯ ಬರೆ ಗ್ರಾಹಕರಿಗೆ ತಟ್ಟಲಿದೆ.
ಇತರೆ ವಿಷಯಗಳು:
ಆಗಸ್ಟ್ 15 ರಿಂದ ಪಡಿತರ ಚೀಟಿದಾರರ ಖಾತೆಗೆ ₹8000 ಜಮಾ ಆಗಿದೆ, ರೇಷನ್ ಕಾರ್ಡುದಾರರು ತಪ್ಪದೆ ನೋಡಿ