ಗೃಹಲಕ್ಷ್ಮೀ ಅಪ್ಡೇಟ್: 2000 ಹಣಕ್ಕಾಗಿ ಬ್ಯಾಂಕ್‌ನತ್ತ ಮಹಿಳೆಯರು; ಮೆಸೇಜ್ ಬಾರದೆ ಗೊಂದಲ! ಅಕೌಂಟ್ ಚೆಕ್ ಮಾಡಲು ಕ್ಯೂ
ಹಲೋ ಸ್ನೇಹಿತರೆ, ರಾಜ್ಯ ಸರ್ಕಾರದ 4ನೇ ಗ್ಯಾರೆಂಟಿ ಗೃಹಲಕ್ಷ್ಮೀ ಜಾರಿಯಾಗಿದೆ. ಮೈಸೂರಿನಲ್ಲಿ ಅಧಿಕೃತವಾಗಿ ಚಾಲನೆ ನೀಡಲಾಯಿತು. ಮನೆಯೊಡತಿಯರ ಖಾತಗೆ 2000 ಹಣ ಕೂಡ ಜಮಾ ಮಾಡಲಾಗಿತ್ತು. ಆದರೆ ಮಸೇಜ್ ಬಾರದೆ ಕೆಲವು ನಾರಿಮಣಿಯರು ಗೊಂದಲಕ್ಕೀಡಾಗಿದ್ದಾರೆ. ಹಣ ಬಂದ ಮಹಿಳೆಯರ ಖಾತೆ ನಿಷ್ಕ್ರಿಯಗೊಂಡಿವೆ. ಮೆಸೇಜ್ ಬಂದಿಲ್ಲಾ ಅಂದ್ರೆ ಹಣ ಬರಲ್ವಾ? ಗೃಹಲಕ್ಷ್ಮೀ ಹಣ ಖಾತೆಗೆ ಜಮಾ ಆಗಿಲ್ವಾ? ಈ ಎಲ್ಲಾ ಮಾಹಿತಿಯ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ.
ನೂರಾರು ಮಹಿಳೆಯರು ಬ್ಯಾಂಕ್ ಮುಂದೆ ಕ್ಯೂ ನಾರಿಯರನ್ನು ನಿಯಂತ್ರಿಸಲು ಪೋಲಿಸರ ಸಾಹಸ ಗೃಹಲಕ್ಷ್ಮೀಯರ ಎಂಟ್ರಿಗೆ ಬ್ಯಾಂಕ್ ಸಿಬ್ಬಂದಿ ಗಲಿಬಿಲಿಯಾಗಿದ್ದರೆ ವಾಹನ ಸವಾರರಿಗೆ ಟ್ರಾಫಿಕ್ ಬಿಸಿ ತಟ್ಟಿದೆ. ಚಿಕ್ಕಮಗಳೂರು ನಗರದಲ್ಲಿ ನೂರಾರು ಮಹಿಳೆಯರು ಮಕ್ಕಳನ್ನು ಕಟ್ಟಿಕೊಂಡು ಬ್ಯಾಂಕ್ ಮುಂದೆ ಕ್ಯೂ ನಿಂತಿದ್ದರು. ಯಾಕಂದ್ರೆ ರಾಜ್ಯ ಸರ್ಕಾರ ಮನೆ ಯಜಮಾನಿಗೆ ಪ್ರತೀ ತಿಂಗಳು 2000 ರೂ ನೀಡುತ್ತಿದೆ. ಹಲವರ ಖಾತೆಗೆ ಈಗಾಗಲೇ ಹಣ ಜಮೆಯಾಗಿದೆ. ಆದರೆ ಗೃಹಲಕ್ಷ್ಮೀ ಹಣ ಕೆಲ ಮಹಿಳೆಯರಿಗೆ ಬಂದಿದ್ದರೆ, ಇನ್ನೂ ಕೆಲವು ಮಹಿಳೆಯರಿಗೆ ಮೆಸೇಜ್ ಬಂದಿಲ್ಲ ಹೀಗಾಗಿ ಏನಾದ್ರು ಆಗಲಿ ಒಮ್ಮೆ ಗೃಹಲಕ್ಷ್ಮೀ ಹಣ ಬ್ಯಾಂಕ್ ಅಕೌಂಟಿಗೆ ಬಂದಿದೆಯೋ ಇಲ್ಲವೋ ಚೆಕ್ ಮಾಡಲು ಮಹಿಳೆಯರೆಲ್ಲರೂ IDBI ಬ್ಯಾಂಕ್ ಕ್ಯೂ ನಿಂತಿದ್ದರು.
ಇದನ್ನು ನೋಡಿ: ಶಕ್ತಿ ಯೋಜನೆ ಹೊಸ ಹೆಜ್ಜೆ: ಮಹಿಳೆಯರ ಸುರಕ್ಷತೆಗೆ ಸರ್ಕಾರದ ಹೊಸ ನಿರ್ಧಾರ.! ಬಸ್‌ಗಳಲ್ಲಿ GPS ಪ್ಯಾನಿಕ್ ಬಟನ್ ಅಳವಡಿಕೆ
ಬೆಳಿಗ್ಗೆ 7 ಗಂಟೆ ಯಿಂದಲೇ 600 ಕ್ಕೂ ಹೆಚ್ಚು ಮಹಿಳೆಯರು ಪಾಸ್ ಬುಕ್ ಸಮೇತ ಬ್ಯಾಂಕ್ ಮುಂದೆ ನಿಂತಿದ್ದರು. ಗೃಹಲಕ್ಷ್ಮೀ ಯೋಜನೆ ಹಣ ಚೆಕ್ ಮಾಡಲು ದಂಡಾಗಿ ಮಹಿಳೆಯರು ಬರುತ್ತಾ ಇದ್ರೆ, ಪ್ರತೀಯೊಬ್ಬರ ಅಕೌಂಟ್ ಚೆಕ್ ಮಾಡಿ ಸಿಬ್ಬಂದಿ ಹೈರಾಣಾದರು. ಕೆಲ ಮಹಿಳೆಯರು ಪೋಲಿಸರ ಜೊತೆ ವಾಗ್ವಾದಕ್ಕೆ ಇಳಿದಿದ್ದರು. ಇತ್ತಾ ರಸ್ತೆ ಪಕ್ಕದಲ್ಲಿ ಮಹಿಳೆಯರು ನಿಂತಿದ್ದರಿಂದ ವಾಹನ ಸವಾರರಿಗೂ ಸಮಸ್ಯೆಯಾಗಿತ್ತು. ಇಷ್ಟೆ ಅಲ್ಲ ಬ್ಯಾಂಕ್ಗೆ ಬೇರೆ ಕೆಲಸಕ್ಕೆ ಬಂದಿದ್ದ ಗ್ರಾಹಕರಿಗೂ ಗೃಹಲಕ್ಷ್ಮೀ ಯೋಜನೆ ಬಿಸಿ ತಟ್ಟಿತ್ತು. ನಾವು ಕೆಲಸ ಬಿಟ್ಟು ಬಂದಿದ್ದೇವೆ ಆದರೆ ಮೆಸೇಜ್ ಬಂದಿಲ್ಲ ಎಂದು ಮಹಿಳೆಯರು ಅಳಲು ತೊಡಿಕೊಂಡಿದ್ದಾರೆ.
ರಾಜ್ಯ ಸರ್ಕಾರ ಗೃಹಲಕ್ಷ್ಮೀಯರಿಗೆ ಪ್ರತೀ ತಿಂಗಳು 2000 ನೀಡೊ ಯೋಜನೆ ಜಾರಿ ಮಾಡಿದೆ. ಇತ್ತಾ ಮಹಿಳೆಯರಿಗೆ ಮೆಸೇಜ್ ಬಾರದೆ ಗೊಂದಲಕ್ಕೀಡಾಗಿದ್ದಾರೆ. ಸರ್ಕಾರ ಇದಕ್ಕೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.
ಇತರೆ ವಿಷಯಗಳು:
ಬೆಳೆ ನಷ್ಟಕ್ಕೆ ಪರಿಹಾರ ಘೋಷಣೆ: ರೈತರಿಗಾಗಿ ಸರ್ಕಾರದಿಂದ 86 ಕೋಟಿ ಬಿಡುಗಡೆ, ಶೀಘ್ರವೇ ಖಾತೆಗೆ ಹಣ ವರ್ಗಾವಣೆ