Breaking News: ಈರುಳ್ಳಿ ಬೆಲೆ ಏರಿಕೆ ಶಾಕ್.! ಕಣ್ಣೀರಿಟ್ಟ ಗ್ರಾಹಕರು.! ಈ ವರ್ಗದ ಜನರಿಗೆ ಮಾತ್ರ ಸಬ್ಸಿಡಿ ದರದಲ್ಲಿ ಸಿಗಲಿದೆ ಈರುಳ್ಳಿ
ಹಲೋ ಸ್ನೇಹಿತರೆ, ಎಲ್ಲ ನಾಗರಿಕರಿಗೆ ದಿನ ಕಳೆದಂತೆ ಬೆಲೆ ಏರಿಕೆ ಶಾಕ್. ಗಗನ ಮುಟ್ಟಿದ ಟೊಮೆಟೊ ಬೆಲೆ 2 ತಿಂಗಳ ಬಳಿಕ ಇಳಿಮುಖವಾಗಿದೆ. ಇದರ ಬೆನ್ನಲ್ಲೇ ಈಗ ಈರುಳ್ಳಿ ಈಗ ಕಣ್ಣೀರು ತರಿಸೊದಿಕ್ಕೆ ರೆಡಿಯಾಗ್ತಾ ಇದೆ. ಇನ್ನೂ ಮುಂದಿನ ತಿಂಗಳು ಇನ್ನಷ್ಟು ದುಬಾರಿಯಾಗಲಿದೆ. ಕೇಂದ್ರ ಸರ್ಕಾರ ಬೆಲೆ ನಿಯಂತ್ರಣಕ್ಕೆ ಮುಂದಾಗಿದೆ ಭಪರ್ ಸ್ಟಾಪ್ ನಿಂದ ಈರುಳ್ಳಿ ಬಿಡುಗಡೆ ಮಾಡಿ ಬೆಲೆ ಏರಿಕೆಗೆ ಪರಿಹಾರ ನೀಡಲು ಮುಂದಾಗಿದೆ. ಏನದು ಪರಿಹಾರ ಮಾರ್ಗ? ಎಷ್ಟು ಹೆಚ್ಳಳವಾಗಲಿದೆ ಈರುಳ್ಳಿ ಬೆಲೆ? ಈ ಎಲ್ಲಾ ಮಾಹಿತಿಯ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ.

ಟೊಮೆಟೊ ನಂತರ ಈಗ ಈರುಳ್ಳಿ ಬೆಲೆ ಏರಿಕೆ ಸರದಿ 200 ರೂ ಗೆ ತಲಪಿದ್ದ ಟೊಮೆಟೊ ಬೆಲೆ ಇದೀಗ ಪ್ರತೀ ಕೆಜಿಗೆ 50 ರೂ ಗೆ ಇಳಿಕೆಯಾಗಿದೆ ಇಷ್ಟು ದಿನ ಟೊಮೆಟೊ ಸಹವಾಸ ಬಿಟ್ಟಿದ್ದ ಮಹಿಳೆಯರು ಬೆಲೆ ಕಡಿಮೆಯಾದ ನಂತರ ಟೊಮೆಟೊ ಖರೀದಿಸೋಕೆ ಮುಂದಾಗಿದ್ದಾರೆ. ಇದೀಗ ಟೊಮೆಟೊ ಬೆಲೆ ಕೊಂಚ ಇಳಿಕೆಯಾಯ್ತು ಅಂತ ಗ್ರಾಹಕರು ನಿಟ್ಟುಸಿರು ಬಿಡೊ ಹೊತ್ತಲ್ಲೇ ಈರುಳ್ಳಿ ಕಣ್ಣೀರು ತರಿಸೋಕೆ ಮುಂದಾಗಿದೆ.
ಗ್ರಾಹಕರಿಗೆ ಈರುಳ್ಳಿ ಹೊರೆ ಇಳಿಸಲು ಮುಂದಾದ ಸರ್ಕಾರ ಮಹತ್ವದ ನಿರ್ಧಾರ. ಈರುಳ್ಳಿ ದುಬಾರಿ ಸುಳಿವು ಅರಿತ ಕೇಂದ್ರ ಸರ್ಕಾರ ನಿನ್ನೆಯಷ್ಟೆ ಈರುಳ್ಳಿ ಮೇಲಿನ ರಫ್ತು ಶುಲ್ಕವನ್ನು ಶೇಕಡಾ 40 ರಷ್ಟು ಹೆಚ್ಚಳ ಮಾಡಿದೆ. ಕೇಂದ್ರ ಹಣಕಾಸು ಸಚಿವಾಲದ ಆದೇಶದಂತೆ ಡಿಸೆಂಬರ್ ಅಂತ್ಯದ ವರೆಗೂ ಈ ಸುಂಕ ಹೆಚ್ಚಳ ಮುಂದುವರಿಯಲಿದೆ. ಇದರ ಮೂಲಕ ದೇಶದಲ್ಲಿ ಈರುಳ್ಳಿ ಬೆಲೆ ಏರಿಕೆಗೆ ನಿಯಂತ್ರಣಕ್ಕೆ ಕೇಂದ್ರ ಪ್ಲಾನ್ ಮಾಡಿದೆ. ಆದ್ರೆ ರಫ್ತು ಸುಂಕ ಹೆಚ್ಚಳದ ಹೊರತಾಗಿಯೂ ಮುಂದಿನ ತಿಂಗಳಿನಿಂದ ಈರುಳ್ಳಿ ಬೆಲೆ ಕನಿಷ್ಠ 20 ರಿಂದ 25 ರೂ ಹೆಚ್ಚಳವಾಗಿದೆ ಎಂದು ಹೇಳಲಾಗಿದೆ.
ಇದನ್ನೂ ಸಹ ಓದಿ: ಆಗಸ್ಟ್ ತಿಂಗಳಲ್ಲಿ ಅನ್ನಭಾಗ್ಯ ಹಣ ಬಂದಿರೋ ಮೆಸೇಜ್ ಬರಲ್ಲ..! ಹೇಗೆ ಚೆಕ್ ಮಾಡುವುದು? ಇಲ್ಲಿ ನೋಡಿ
ಇಂದಿನಿಂದ ಪ್ರತೀ ಕೆಜಿ ಈರುಳ್ಳಿ 25 ರೂ ಗೆ ಸೇಲ್ ಮಹತ್ವದ ಹೆಜ್ಜೆಯೊಂದರಲ್ಲಿ ಕೇಂದ್ರ ಸರ್ಕಾರವು ಈರುಳ್ಳಿ ಭಪರ್ ಸ್ಟಾಕ್ ಮತಿಯಲ್ಲಿ 3 ಲಕ್ಷ ಮೆಟ್ರಕ್ ಟನ್ ಗಳಿಂದ 5 ಲಕ್ಷ ಮೆಟ್ರಿಕ್ ಟನ್ ಗೆ ಹೆಚ್ಚಿಸಿದೆ. ಈಗಾಗಲೇ ಕೇಂದ್ರ ಸರ್ಕಾರ 3 ಲಕ್ಷ ಮೆಟ್ರಿಕ್ ಟನ್ ಈರುಳ್ಳಿಯನ್ನು ಭಫರ್ ಸ್ಟಾಕ್ ನಲ್ಲಿ ಇಟ್ಟುಕೊಂಡಿದ್ದು ಈಗ ಹೆಚ್ಚಿವರಿಯಾಗಿ ಇನ್ನೂ 2 ಲಕ್ಷ ಮೆಟ್ರಿಕ್ ಟನ್ ಈರುಳ್ಳಿಯನ್ನಾ ದಾಸ್ತಾನಿಗೆ ಮುಂದಾಗಿದೆ.
ಇಂದಿನಿಂದ ದೆಹಲಿಯಲ್ಲಿ ಚಿಲ್ಲರೆ ಮಳಿಗೆಗಳು ಮತ್ತು ಭಾರತದ ರಾಷ್ಟೀಯ ಸಹಕಾರ ಗ್ರಾಹಕರ ಒಕ್ಕೂಟ ಮೊಬೈಲ್ ಬ್ಯಾನ್‌ಗಳ ಮೂಲಕ ಚಿಲ್ಲರೆ ಗ್ರಾಹಕರಿಗೆ ಪ್ರತಿ ಕೆಜಿಗೆ 25 ರೂ ಸಬ್ಸಿಡಿ ದರದಲ್ಲಿ ಲಭ್ಯವಾಗುವಂತೆ ಮಾರಾಟ ಮಾಡಲಾಗುತ್ತದೆ.
ಇತರೆ ವಿಷಯಗಳು:
ಸೋಷಿಯಲ್ ಮೀಡಿಯಾ ಪ್ರಿಯರಿಗೆ ಸಂಕಷ್ಟ! ಫೇಸ್ ಬುಕ್, ಇನ್ಸ್ಟಾಗ್ರಾಂ, ವಾಟ್ಸಾಪ್ ಬ್ಯಾನ್ ಮಾಡಲು ಸರ್ಕಾರದ ನಿರ್ಧಾರ..!