ರಾಜ್ಯದಲ್ಲಿ ದಾಖಲೆ ಮಟ್ಟದ ವಿದ್ಯುತ್ ಕುಸಿತ..! ಸರ್ಕಾರಕ್ಕೆ ತಲೆನೋವು ತಂದ ಲೋಡ್ ಶೆಡ್ಡಿಂಗ್
ಹಲೋ ಸ್ನೇಹಿತರೆ, ಮಳೆ ಇಲ್ಲದ ಪರಿಸ್ಥಿತಿ ವಿದ್ಯುತ್ ಕೊರತೆ. ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಮಾಡುತ್ತಿಲ್ಲ ಸರ್ಕಾರ ಹೇಳುತ್ತಾ ಇದೆ. ಆದರೆ ಹಲವು ಕಡೆ ಅನಧಿಕೃತವಾಗಿ ಈ ಸಮಸ್ಯೆ ಕಂಡುಬರುತ್ತಾ ಇದೆ. ಇದರ ಬೆನ್ನಲ್ಲೇ ವಿದ್ಯುತ್ ಉತ್ಪಾದನೆ ಪ್ರಮಾಣನೇ ಕುಂಠಿತವಾಗಿದೆ. ಹಾಗಾದರೆ ವಿದ್ಯುತ್ ಉತ್ಪಾದನೆ ಎಷ್ಟರ ಮಟ್ಟಿಗೆ ಕುಂಠಿತವಾಗಿದೆ. ಸರ್ಕಾರಕ್ಕೆ ತಂದ ತಲೆನೋವು ಏನು? ಈ ಎಲ್ಲಾ ಮಾಹಿತಿಯ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ.
ರಾಜ್ಯದಲ್ಲಿ ಅನಧಿಕೃತ ಲೋಡ್ ಶೆಡ್ಡಿಂಗ್ ಮಾಡುತ್ತಾ ಇರೋದು ಯಾಕೆ. ದಾಖಲೆ ಮಟ್ಟದಲ್ಲಿ ವಿದ್ಯುತ್ ಉತ್ಪಾದನೆ ಕುಸಿತ ಸರ್ಕಾರಕ್ಕೆ ತಲೆನೂವು ತಂದ ಕಲ್ಲಿದ್ದಲ ಕೊರತೆ ತಾಂತ್ರಿಕ ಸಮಸ್ಯೆ ರಾಜ್ಯ ಇಂಧನ ಸಚಿವ ಕೆ ಜೆ ಜಾರ್ಜ್ ಪ್ರಶ್ನೆ ಮಾಡಿದ ಪ್ರತಿ ಬಾರಿಯೂ ರಾಜ್ಯದಲ್ಲಿ ಅಧಿಕೃತ ಲೋಡ್ ಶೆಡ್ಡಿಂಗ್ ಎಲ್ಲೂ ಇಲ್ಲ ಎಂದು ಹೇಳುತ್ತಾರೆ. ಆದರೆ ರಾಯಚೂರು ಜಿಲ್ಲೆ ಸೇರಿದಂತೆ ಹಲವು ಕಡೆ ವಿದ್ಯುತ್ ಸಮಸ್ಯೆ ತಲೆದೂರಿದೆ. ಇದಕ್ಕೆ ಮುಖ್ಯ ಕಾರಣ ರಾಜ್ಯ ವಿದ್ಯುತ್ ಬೇಡಿಕೆ ಮತ್ತು ಉತ್ಪಾದನೆ ಪ್ರಮಾಣ ಭಾರೀ ವ್ಯತ್ಯಾಸ ಕಂಡುಬರುತ್ತಾ ಇದೆ.
ಇದನ್ನು ಓದಿ: BPL ಕಾರ್ಡ್ ಅರ್ಜಿದಾರರಿಗೆ ಗುಡ್ ನ್ಯೂಸ್..! ಹಳೆ ಅರ್ಜಿ ಕ್ಲಿಯರ್, ಹೊಸ ಕಾರ್ಡ್ ಗೆ ಅರ್ಜಿ ಆರಂಭ; ಸರ್ಕಾರದ ಹೊಸ ಆದೇಶ
ರಾಜ್ಯಕ್ಕೆ ಶೇಕಡಾ 40 ರಷ್ಟು ವಿದ್ಯುತ್ ಪೂರೈಸುತ್ತಾ ಇದ್ದಾ ರಾಯಚೂರಿವ ಶಾಖಉತ್ಪನ್ನ ವಿದ್ಯುತ್ ಕೇಂದ್ರ ಈಗ ಬಂದ್ ಆಗೋ ಪರಿಸ್ಥಿತಿ. ವಿದ್ಯುತ್ ಕೇಂದ್ರ ಒಟ್ಟು 8 ಘಟಕಗಳಲ್ಲಿ 6 ಘಟಕಗಳು ವಿದ್ಯುತ್ ಉತ್ಪಾದನೆ ನಿಲ್ಲಿಸಿವೆ. 2 ಘಟಕಗಳು ಮಾತ್ರ ಕನಿಷ್ಠ ಮಟ್ಟದಲ್ಲಿ ವಿದ್ಯುತ್ ಉತ್ಪಾದಿಸುತ್ತಾ ಇದೆ. 1720 ಮೆಗಾ ವ್ಯಾಟ್ ಉತ್ಪಾದನಾ ಸಾಮರ್ಥದ ಉತ್ಪಾದನಾ ಕೇಂದ್ರ ಈಗ ಕೇವಲ 144 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುತ್ತಾ ಇದ್ದೂ ದಾಖಲೇ ಮಟ್ಟದ ಕುಸಿತ ಕಲ್ಲಿದ್ದಲು ಕೊರತೆ ಹಾಗೂ ತಾಂತ್ರಿಕ ಸಮಸ್ಯೆಯಿಂದ 6 ಘಟಕಗಳು ಬಂದ್ ಆಗಿವೆ. ಹೀಗಾಗಿ ರಾಜ್ಯದ ವಿದ್ಯುತ್ ಬೇಡಿಕೆ ಪೂರೈಕೆ ಸವಾಲಾಗಿದೆ.
ರಾಜ್ಯದ ಶಾಖೋತ್ಪನ್ನಾ ಹಾಗೂ ಹೈಡ್ರೋ ಸೇರಿ ವಿವಿಧ ಮೂಲಗಳ ವಿದ್ಯುತ್ ಉತ್ಪಾದನಾ ಸಾಮರ್ಥ್ಯ 11,336 ಮೆಗಾ ವ್ಯಾಟ್ ಇದ್ದೂ ಉತ್ಪಾದನೆ ಮಾತ್ರ 3550 ಮೆಗಾ ವ್ಯಾಟ್ ಇದೆ. ಆದರೆ ರಾಜ್ಯದ ಬೇಡಿಕೆ 11, 468 ಮೆಗಾ ವ್ಯಾಟ್ ಬೇಡಿಕೆ ಸರಿದೂಗಿಸಲು ಸರ್ಕಾರ ವಿವಿಧ ಮೂಲಗಳಿಂದ ನಾನ ಕಸರತ್ತು ನೆಡೆಸಿದೆ. ಹೀಗಾಗಿ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಮಸ್ಯೆ ಪದೆ ಪದೆ ಎದುರಾಗುತ್ತಾ ಇದೆ.
ಇತರೆ ವಿಷಯಗಳು:
PM ಕಿಸಾನ್ ಫಲಾನುಭವಿಗಳಿಗೆ ಬಂದಿದೆ ಗುಡ್ ನ್ಯೂಸ್.! ₹4000 ಖಾತೆಗೆ ಜಮಾ; ತಕ್ಷಣ ಅರ್ಜಿ ಸ್ಟೇಟಸ್ ಚೆಕ್ ಮಾಡಿ
400 ರೂ.ಗೆ LPG ಸಿಲಿಂಡರ್; ಪೆಟ್ರೋಲ್-ಡೀಸೆಲ್ ಬೆಲೆ ಕೂಡ ಇಳಿಕೆ; ಸರ್ಕಾರದಿಂದ ಮತ್ತೊಂದು ಘೋಷಣೆ.!