ಜನತೆಗೆ ರಾಜ್ಯ ಸರ್ಕಾರದ ಶಾಕ್..! ಅಕ್ಟೋಬರ್ 1 ರಿಂದ ಆಸ್ತಿ ನೋಂದಣಿ ದರ ಹೆಚ್ಚಳ
ಹಲೋ ಫ್ರೆಂಡ್ಸ್, ಬೆಲೆ ಏರಿಕೆಯಿಂದ ಈಗಾಗಲೇ ಕಂಗಾಲಾಗಿರುವ ಜನತೆಗೆ ರಾಜ್ಯ ಸರ್ಕಾರ ಶಾಕ್ ನೀಡಿದೆ. ಆಸ್ತಿ ನೋಂದಣಿ ದರ ಹೆಚ್ಚಳ ಮಾಡಿದೆ. ಅಕ್ಟೋಬರ್ 1 ರಿಂದ ಆಸ್ತಿ ನೋಂದಣಿ ಮಾರ್ಗಸೂಚಿ ದರ ಹೆಚ್ಚಳ ಇದು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಆಸ್ತಿ ತೆರಿಗೆ ಮೇಲೆ ನೇರವಾಗಿ ಪರಿಣಾಮ ಬೀಳಲಿದೆ. ತೆರಿಗೆ ವಿಚಾರದಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ವ್ಯಾಪಕವಾಗಿ ಪ್ರಮುಖವಾಗಿ ಹೆಚ್ಚು ಪರಿಣಾಮ ಕಂಡುಬರಲಿದೆ. ಎಷ್ಟು ಹೆಚ್ಚಳ ಮಾಡಲು ಆದೇಶ ಹೊರಡಿಸಿದೆ ಸರ್ಕಾರ ಗೊತ್ತಾ?
ಮಾರ್ಗಸೂಚಿ ದರ ಕಡಿಮೆ ಇದ್ದರೂ ಮಾರುಕಟ್ಟೆ ಹೆಚ್ಚಿರೋ ಕಡೆ ದರ ಹೆಚ್ಚಳ. ಅಂದಾಜು 25%-30% ದರ ಪರಿಷ್ಕರಣೆ ಮಾಡಲು ತಿರ್ಮಾನ ಕೈಗೊಳ್ಳಲಾಗಿದೆ. ಆ ಮೂಲಕ 2.5 ಸಾವಿರ ಕೋಟಿ ಸಂಗ್ರಹದ ಗುರಿಯನ್ನು ಸರ್ಕಾರ ಹೊಂದಿದೆ. ಅದೇ ಈಗ ಬೆಲೆ ಏರಿಕೆಯಿಂದ ರೋಸಿ ಹೋಗಿರುವ ಜನರಿಗೆ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲೂ ಕೂಡ ಬಿಸಿ ತಟ್ಟೋ ಹಾಗೇ ಕಾಣಿಸ್ತಾ ಇದೆ.
ಇದನ್ನು ಸಹ ಓದಿ: ರಾಜ್ಯದಲ್ಲಿ ಹಳೆಯ ಪಿಂಚಣಿ ಯೋಜನೆ ಜಾರಿ..! ಉದ್ಯೋಗಿಗಳಿಗೆ 14% ಹೆಚ್ಚು ಲಾಭ; ಸರ್ಕಾರದ ಮಹತ್ತರ ಘೋಷಣೆ
ಇಲ್ಲೊಂದು ವರ್ಗದ ಜನ ಗ್ಯಾರೆಂಟಿ ಯೋಜನೆಗಳಿಗೆ ಹಣ ಹೊಂದಿಸಲು ಸರ್ಕಸ್ ನ ಮುಂದುವರಿದ ಭಾಗ ಎಂದು ಹೇಳುತ್ತಾ ಇದ್ದಾರೆ. 25%-30% ದರ ಪರಿಶ್ಕರಣೆಗೆ ನಿರ್ಧಾರ ಮಾಡಲಾಗಿದೆ. 5 ವರ್ಷಗಳ ನಂತರ ಮಾರ್ಗಸೂಚಿ ದರ ಪರಿಷ್ಕರಣೆ ಆಗಿದೆ.
ಅಕ್ಟೋಬರ್ 1 ರಿಂದ ದರ ಹೆಚ್ಚಳ ಮಾಡಲು ಸಿದ್ಧತೆಯನ್ನು ಸರ್ಕಾರ ಮಾಡಿಕೊಳ್ಳುತ್ತಾ ಇದ್ದೂ, ಈ ಬಾರಿ ಎಲ್ಲಾ ಭಾಗದಲ್ಲೂ ಒಂದೇ ದರ ನಿಗದಿ ಮಾಡದೇ ಕೆಲವು ಕಡೆ ಈಗಿರುವ ಮಾರ್ಗಸೂಚಿ ದರ ಅಪರೂಪದ ಪ್ರಕರಣದಲ್ಲಿ ಮಾರುಕಟ್ಟೆ ಬೆಲೆಗಿಂತ ಹೆಚ್ಚಿರುವ ಕಡೆ ಮಾರ್ಗಸೂಚಿ ದರ ಕಡಿಮೆ ಮಾಡುವ ತಿರ್ಮಾನವನ್ನು ಅಧಿಕಾರಿ ಮಾಡುತ್ತಾ ಇದ್ದಾರೆ.
ಇತರೆ ವಿಷಯಗಳು:
ATM ಬಳಕೆದಾರರಿಗೆ ಹೊಸ ಸೌಲಭ್ಯ..! ಕಾರ್ಡ್ ಇಲ್ಲದೆ ಹಣ ತೆಗೆಯಲು RBI ಹೊಸ ಪ್ಲಾನ್
BPL ಕಾರ್ಡುದಾರರಿಗೆ ಆಹಾರ ಇಲಾಖೆ ಗುಡ್ ನ್ಯೂಸ್..! ತಿದ್ದುಪಡಿಗೆ ಅರ್ಜಿ ಸಲ್ಲಿಸಿದ್ದ ಕಾರ್ಡುಗಳಿಗೆ ಸಿಕ್ತು ಸಮ್ಮತಿ