ರಾಜ್ಯಕ್ಕೆ ಮತ್ತೆ ಅಬ್ಬರಿಸಿದ ವರುಣಾರ್ಭಟ..! 4-5 ದಿನ ಈ ಡೇಂಜರ್ ಮಳೆ ನಿಲ್ಲಲ್ಲ; ಎಚ್ಚರಿಸಿದ ಹವಮಾನ ಇಲಾಖೆ
ಹಲೋ ಸ್ನೇಹಿತರೆ, ರಾಜ್ಯಾದ್ಯಂತ ಮಳೆ ಸದ್ದು ಮಾಡುತ್ತಿದೆ, ಇಂದಿನಿಂದ ಮಳೆ ಮತ್ತೆ ಆರಂಭವಾಗಿದ್ದೂ ಎಲ್ಲಾ ರೈತರ ಮುಖದಲ್ಲಿ ಸಂತಸದ ಛಾಯೆ ಮೂಡಿಸಿದೆ. ಕಳೆದ ಕೆಲವು ದಿನಗಳಿಂದ ಮಳೆ ಕಾಣೆಯಾಗಿರುವುದನ್ನು ಕಂಡು ಜನ ಆತಂಕಕ್ಕೆ ಒಳಗಾಗಿದ್ದರು. ಇಂದಿನಿಂದ ಮಳೆ ಮತ್ತೆ ಚುರುಕು ಪಡೆದಿದೆ, ಯಾವ ಯಾವ ಜಿಲ್ಲೆಗಳಲ್ಲಿ ಮಳೆಯಾಗಲಿದೆ? ಎಷ್ಟು ಮಳೆಯಾಗಲಿದೆ ಈ ಎಲ್ಲಾ ಮಾಹಿತಿಯ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ.
ರಾಜ್ಯದಲ್ಲಿ ಮತ್ತೆ ಮುಂಗಾರು ಮಳೆ ಚುರುಕು ಪಡೆದುಕೊಳ್ಳುವ ಸಾಧ್ಯತೆ ಕಂಡುಬರುತ್ತಿದೆ. ಇವತ್ತಿನಿಂದ ಮುಂಗಾರು ಚುರುಕುಗೊಳ್ಳುವ ಸಾಧ್ಯತೆ ಇದೆ. ಭಾರೀ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ಕೊಟ್ಟಿದೆ. ಮುಂದಿನ 4-5 ದಿನಗಳಕಾಲ ರಾಜ್ಯದಲ್ಲಿ ಭಾರೀ ಮಳೆ ಸುರಿಯಲಿದೆ.
ಇದನ್ನೂ ಸಹ ಓದಿ: ರಾಜ್ಯದ ಮಹಿಳೆಯರಿಗೆ ವರಮಹಾಲಕ್ಷ್ಮೀ ಆಫರ್! ಸರ್ಕಾರದಿಂದ ಪ್ರತಿ ತಿಂಗಳು 1000 ರೂ. ಬ್ಯಾಂಕ್ ಖಾತೆಗೆ, ಪಡಿತರ ಅಂಗಡಿಯಲ್ಲಿ ಅರ್ಜಿ ಸಲ್ಲಿಸಿ ಹಣ ಪಡೆಯಿರಿ
ಮಳೆ ನಿಂತು ಹೊಯ್ತಾ ಅಂತ ಕಂಗಾಲಾಗಿದ್ದ ಜನರಿಗೆ ಗುಡ್ ನ್ಯೂಸ್. ಮತ್ತೆ ಮಳೆ ಆರಂಭವಾಗುವ ಮುನ್ಸೂಚನೆ ಕಂಡುಬರುತ್ತಾ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೇ ಹೈ ಅಲರ್ಟ್ ಘೋಷಿಸಿದೆ. ಬೆಳಗಾವಿ ಬೀದರ್ ಕಲಬುರುಗಿ ಕೊಡಗು ಶಿವಮೊಗ್ಗ ಜಿಲ್ಲೆಗಳಿಗೆ ಸಾಧಾರಣ ಮಳೆ. ಇನ್ನೂ ಬಾಗಲಕೋಟ್ ಹಾವೇರಿ ಕೊಪ್ಪಳ ರಾಯಚೂರು ವಿಜಯಪುರ ಬಳ್ಳಾರಿ ಚಾಮರಾಜನಗರ ಯಥಾಸ್ಥಿತಿ ಮಳೆ ಸುರಿಯಬಹುದು ಎಂದು ಹವಾಮಾನ ಇಲಾಖೆ ಹೇಳಿದೆ.
“ರಾಜ್ಯದಾದ್ಯಂತ ಹಲವೆಡೆ ಮಳೆ ಮತ್ತೆ ಆರಂಭವಾಗಿದೆ, ಜುಲೈನಲ್ಲಿ ಮಳೆ ಕೊರತೆಯಿತ್ತು, ಆದರೆ ಆಗಸ್ಟನಲ್ಲಿ ಇದು ಸಾಮಾನ್ಯಕ್ಕಿಂತ ಸ್ವಲ್ಪ ಹೆಚ್ಚಾಗಿದೆ” ಎಂದು ತಿಳಿಸಿದೆ.