ರೇಷನ್ ಕಾರ್ಡ್ ನಿಂದ ಗ್ಯಾರೆಂಟಿ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ತಡವಾಗ್ತಾ ಇದೆಯಾ? ರೇಷನ್ ಕಾರ್ಡ್ ತಿದ್ದುಪಡಿ ಲಿಂಕ್ ಓಪನ್, ಇಂದೇ ಈ ಕೆಲಸ ಮಾಡಿ
ಹಲೋ ಸ್ನೇಹಿತರೆ, ಪಡಿತರ ಚೀಟಿದಾರರು ಪಡಿತರ ಚೀಟಿ ವಿವರದಲ್ಲಿ ಯಾವುದೇ ತಪ್ಪು ಕಂಡುಬಂದಲ್ಲಿ ವಿವರಗಳನ್ನು ಪರಿಪಡಿಸಿಕೊಳ್ಳಬೇಕು. ನಿಮ್ಮ ಪಡಿತರ ಚೀಟಿಯಲ್ಲಿ ಏನಾದರೂ ತಪ್ಪುಗಳಿದ್ದೂ ಗೃಹಲಕ್ಷ್ಮೀ ಅಥವಾ ಇನ್ನಿತರ ಗ್ಯಾರೆಂಟಿಗಳಿಗೆ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ತಡವಾಗುತ್ತಿದ್ದರೆ, ಈಗ ಪಡಿತರ ಚೀಟಿಯಲ್ಲಿನ ತಪ್ಪುಗಳನ್ನು ಸರಿಪಡಿಸಿಕೊಂಡು ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದೆ. ಹೆಚ್ಚಿನ ಮಾಹಿತಿ ತಿಳಿಯಲು ಈ ಲೇಖನವನ್ನು ಕೊನೆವರೆಗೂ ಓದಿ.
ರಾಜ್ಯ ಸರ್ಕಾರದ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿ ನೋಂದಣಿ ಪ್ರಕ್ರಿಯೆ ಆರಂಭವಾದ ಬಳಿಕ ಮಹಿಳೆಯರು ಪಡಿತರ ಚೀಟಿಯಲ್ಲಿ ಯಾಜಮಾನಿ ಸ್ಥಾನಕ್ಕಾಗಿ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಮತ್ತಿತರ ದಾಖಲೆ ಹಿಡಿದು ಸೇವಾ ಕೇಂದ್ರ ಹಾಗೂ ಸರ್ಕಾರಿ ಕಛೇರಿಗಳಲ್ಲಿ ಅರ್ಜಿ ಸಲ್ಲಿಸುತ್ತಿದ್ದಾರೆ. ಹಾಗಾಗಿ ಪಡಿತರ ಚೀಟಿ ತಿದ್ದುಪಡಿಗೆ ಸರ್ಕಾರ ಅವಕಾಶ ಓದಗಿಸಿಕೊಟ್ಟಿದೆ.
ರೇಷನ್ ಕಾರ್ಡ್ ತಿದ್ದುಪಡಿಗೆ 16 ರಿಂದ ಅವಕಾಶ
ರೇಷನ್ ಕಾರ್ಡ್ ತಿದ್ದುಪಡಿಗೆ ಸರ್ಕಾರ ದಿನಾಂಕ ಹಾಗೂ ಸಮಯ ನಿಗದಿಮಾಡಿದೆ. ಬೆಳ್ಳಿಗೆ 10 ರಿಂದ ಸಂಜೆ 4 ದ ವರೆಗೆ ದಿನಾಂಕ 16-08-2023 ರಿಂದ 19-08-2023 ರ ವರೆಗೆ ಅವಕಾಶ ನೀಡಲಾಗಿದೆ. ಪಡಿತರ ಚೀಟಿ ತಿದ್ದುಪಡಿಗೆ ಕೇವಲ 4 ದಿನ ಮಾತ್ರ ಕಾಲಾವಕಾಶ ಇರುತ್ತದೆ. 4 ದಿನ ಅವಕಾಶ ಇರುವುದರಿಂದ ಎಲ್ಲರೂ ಈ ಲೇಖನವನ್ನು ಕೊನೆವರೆಗೂ ಓದಿ.
ಇತರೆ ವಿಷಯಗಳು: ಮಹಿಳೆಯರಿಗೆ ಮತ್ತೆ ನಿರಾಸೆ ಮೂಡಿಸಿದ ಕಾಂಗ್ರೆಸ್! ಆಗಸ್ಟ್‌ನಲ್ಲಿ ಬರಲ್ವಂತೆ ಗೃಹಲಕ್ಷ್ಮಿ ಹಣ; ಕಾರಣ ಏನು ಗೊತ್ತಾ?
ಅಗತ್ಯ ದಾಖಲೆಗಳು:
- ಕುಟುಂಬ ಸದಸ್ಯರ ಆಧಾರ್ ಕಾರ್ಡ್
- 5 ರ್ಷದ ಒಳಗಿನ ಮಕ್ಕಳನ್ನು ಸೆರ್ಪಡೆಮಾಡಬೇಕಾದಲ್ಲಿ, ಅವರ ಆಧಾರ್ ಕಾರ್ಡ್ ಹಾಗೂ ಜನನ ಪ್ರಮಾಣ ಪತ್ರ
ಎಲ್ಲಿ ಹೇಗೆ ರೇಷನ್ ಕಾರ್ಡ್ ತಿದ್ದುಪಡಿ ಮಾಡಬೇಕು?
ರೇಷನ್ ಕಾರ್ಡ್ ತಿದ್ದುಪಡಿಗೆ ಪಡಿತರ ಚೀಟಿ ಪೋರ್ಟಲ್ ನಲ್ಲಿ ಅವಕಾಶ ನೀಡುವುದರ ಬಗ್ಗೆ ಮಾಹಿತಿ ನೀಡಿಲ್ಲ. ಆದರೆ ನೀವು ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರ, ಬೆಂಗಳೂರು ಒನ್ ಕೇಂದ್ರಗಳಲ್ಲಿ ನಿಮ್ಮ ಪಡಿತರ ಚೀಟಿ ತಿದ್ದುಪಡಿ ಮಾಡ್ಸಿಕೊಳ್ಳಲು ಮಾಹಿತಿ ತಿಳಿಯಿರಿ.
ಇತರೆ ವಿಷಯಗಳು:
ರಕ್ಷಾ ಬಂಧನಕ್ಕೂ ಮುನ್ನ ಸರ್ಕಾರದಿಂದ ಜನರಿಗೆ ಬಂಪರ್ ಗಿಫ್ಟ್! LPG ಸಿಲಿಂಡರ್ ಬೆಲೆ ಕೊಂಚ ಇಳಿಕೆ, ಹೊಸ ಬೆಲೆ ನೋಡಿ