BPL APL ಕಾರ್ಡುದಾರರಿಗೆ ಹೊಸ ಸಂಕಷ್ಟ..! ಕಾರ್ಡ್‌ನಲ್ಲಿ ಇವರ ಹೆಸರಿಲ್ಲದಿದ್ದರೆ ಸಿಗಲ್ಲ ಅನ್ನಭಾಗ್ಯ, ಗೃಹಲಕ್ಷ್ಮಿ

0

ಹಲೋ ಸ್ನೇಹಿತರೆ, ಕಾಂಗ್ರೆಸ್‌ ಸರ್ಕಾರದ ಮಹತ್ವದ ಸ್ಕೀಮ್‌ಗಳಲ್ಲಿ 4 ಸ್ಕೀಮ್‌ ಗಳು ಜಾರಿಯಾಗಿದ್ದು ಫಲಾನುಭವಿಗಳು ಕೂಡ ಅದರ ಲಾಭ ಪಡೆದುಕೊಳ್ಳುತ್ತಿದ್ದಾರೆ. ಆದ್ರೆ ಈ ಮಧ್ಯೆ ಫಲಾನುಭವಿಗಳಿಗೆ ಹೊಸ ಸಮಸ್ಯೆ ಎದುರಾಗಿದೆ. ಈಗ ಸರ್ಕಾರ ಅರ್ಜಿ ಸಲ್ಲಿಸಿದ ಎಲ್ಲರಿಗೂ ಈ ಯೋಜನೆಯ ಲಾಭ ಸಿಗಲ್ಲ ಏನ್ನುತ್ತಿದ್ದಾರೆ. ಯೋಜನೆಯ ಲಾಭ ಪಡೆಯಲು ರೇಷನ್‌ ಕಾರ್ಡ್‌ನಲ್ಲಿ ಈ ಬದಲಾವಣೆ ಮಾಡಬೇಕು ಎಂದು ಸೂಚನೆ ಮಾಡಲಾಗಿದೆ. ಏನು ಆ ಸಮಸ್ಯೆ? ಮಾಡಬೇಕಾದ ಬದಲಾವಣೆ ಏನು? ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ.

Ration Card Karnataka Updates

ಗ್ಯಾರೆಂಟಿಗಳ ಮೂಲಕ ರಾಜ್ಯದ ಜನಮನ ಗೆದ್ದಿರುವ ಕಾಂಗ್ರೆಸ್‌ ನುಡಿದಂತೆ ಒಂದೊಂದು ಗ್ಯಾರೆಂಟಿಗಳನ್ನು ಅನುಷ್ಠಾನ ಮಾಡುತ್ತಿದೆ. ಮೊನ್ನೆಯಷ್ಟೆ ಮಹಿಳೆಯರ ಮನೆ ಬಾಗಿಲಿಗೆ ಗೃಹಲಕ್ಷ್ಮೀ ಕೂಡ ಎಂಟ್ರಿ ಕೊಟ್ಟಿದ್ದಾಳೇ ಈ ಸಂಭ್ರಮದ ನಡುವೆ ಸರ್ಕಾರ ಬಿಗ್‌ ಶಾಕ್‌ ಕೊಟ್ಟಿದೆ. BPL APL ಕಾರ್ಡ್ದಾರರಿಗೆ ಸಂಕಷ್ಟ ಎದುರಾಗಿದೆ.

ರೇಷನ್‌ ಕಾರ್ಡ್ ನಲ್ಲಿ ಕೆಲವು ವರ್ಷಗಳ ಹಿಂದೆ ಅಪ್ಡೇಟ್‌ ಮಾಡಿಸಿ ನಂತರ ಕಾರ್ಡ್ ನಲ್ಲಿ ಮನೆಯ ಮುಖ್ಯಸ್ಥರಾಗಿ ಮಹಿಳೆಯರ ಹೆಸರನ್ನು ಯಜಮಾನಿಯಾಗಿ ಮಾಡಿತ್ತು. ಆದರೆ ಕೆಲವರು ಈ ನಿಯಮವನ್ನು ಉಲ್ಲಂಘಿಸಿದ್ದರು ಅದರ ಪರಿಣಾಮವಾಗಿ ಈ ಕಾಂಗ್ರೆಸ್‌ ಸರ್ಕಾರ ಗೃಹಲಕ್ಷ್ಮೀ ಯೋಜನೆ ಲಾಭ ಪಡೆಯಲು ತಡೆಯಾಗುತ್ತಿದೆ. ಮುಖ್ಯಸ್ಥರು ಪುರುಷರಾಗಿದ್ದರೆ ಸಿಗಲ್ಲ ಅನ್ನಭಾಗ್ಯ, ಗೃಹಲಕ್ಷ್ಮೀ BPL ಕಾರ್ಡ್ಗಳ ಹೆಡ್‌ ಆಫ ದಿ ಫ್ಯಾಮಿಲಿ ಪುರುಷರೇ ಆಗಿದ್ದರೆ ಗೃಹಲಕ್ಷ್ಮೀ ಅನ್ನಭಾಗ್ಯ ಸ್ಕೀಮ್‌ ಸಿಗೋದಿಲ್ಲ ಎಂದು ಹೇಳಲಾಗುತ್ತಿದೆ.

ಇದನ್ನೂ ಸಹ ಓದಿ: ಗೃಹಲಕ್ಷ್ಮೀ ವಂಚಿತ ಮಹಿಳೆಯರಿಗೆ ಗುಡ್‌ ನ್ಯೂಸ್..! ರೇಷನ್‌ ಕಾರ್ಡ್‌ ತಿದ್ದುಪಡಿಗೆ ಕಾಲಾವಕಾಶ ವಿಸ್ತರಣೆ; ಈಗ ಅಪ್ಲೈ ಮಾಡಿದ್ರು ಸೆಪ್ಟಂಬರ್‌ ನಲ್ಲಿ ಹಣ

ಕಾರ್ಡ್ ನಲ್ಲಿ 18 ವರ್ಷದ ಒಳಗಿದ್ದ ಬಾಲಕಿಯರು ಇದ್ದರೆ ತೊಂದರೆ ಇಲ್ಲ ಆದರೆ ವಯಸ್ಕ ಮಹಿಳೆ ಇದ್ದು ಕಾರ್ಡ್‌ ಮುಖ್ಯಸ್ಥ ಗಂಡಸರು ಆಗಿದ್ದರೆ ಅನ್ನಭಾಗ್ಯ ಸ್ಕೀಮ್‌ ಸಿಗಲ್ಲ, ಗೃಹಲಕ್ಷ್ಮೀ ಗೆ ಅರ್ಜಿ ಸಲ್ಲಿಸಲು BPL APL ಮನೆಯೊಡತಿಯ ಹೆಸರಿರಬೇಕು ಇಲ್ಲದಿದ್ದರೆ ಗೃಹಲಕ್ಷ್ಮೀ ಅನ್ನಭಾಗ್ಯ ಸ್ಕೀಮ್‌ ಎರಡು ಯೋಜನೆಗಳಿಗೆ ಅನರ್ಹರಾಗುತ್ತಾರಂತೆ. ಈ ಎರಡು ಯೋಜನೆಗಳಿಗೆ ಮಹಿಳೆಯರು ಹೆಚ್ಚು ಪ್ರಾಧಾನ್ಯತೆ ನೀಡುತ್ತಿರುವುದರಿಂದ ಈ ನಿಯಮವನ್ನು ಕಡ್ಡಾಯವಾಗಿ ಮಾಡಲಾಗಿದೆ.

ನಿಯಮದ ಪ್ರಕಾರ ಈ ಕಾರ್ಡ್ನಿಂದ ಅರ್ಜಿ ಸಲ್ಲಿಸಿದರೆ ಅರ್ಜಿ ಸ್ವೀಕಾರವಾಗುತ್ತಿಲ್ಲ. ಈ ಸಮಸ್ಯೆಗೆ ಪರಿಹಾರ ನೀಡಲು ಆಹಾರ ಇಲಾಖೆ ಸಮಯ ನಿಗದಿ ಮಾಡಿದೆ. ಇಲಾಖೆ ಪ್ರಕಾರ 94% ಕಾರ್ಡ್‌ ಗಳ್ಲಿ ಮಹಿಳೆಯರೇ ಮುಖ್ಯಸ್ಥರಾಗಿದ್ದಾರೆ, ಇನ್ನೂ 4% ಕಾರ್ಡ್ಗಳಲ್ಲಿ ಪುರುಷರು ಮುಖ್ಯಸ್ಥರಾಗಿದಾರೆ. ಹೀಗಾಗಿ ಈಗಾಗಲೇ ಗೃಹಲಕ್ಷ್ಮೀಗೆ ಅರ್ಜಿ ಸಲ್ಲಿಕೆ ಮಾಡಿದ 1.28 ಲಕ್ಷ ಫಲಾನುಭವಿಗಳ ಪೈಕಿ 1.11 ಲಕ್ಷ ಅರ್ಜಿ ಸಲ್ಲಿಕೆಯಾಗಿದ್ದೂ ಇನ್ನೂ 18 ಲಕ್ಷದಷ್ಟು ಮಹಿಳೆಯರು ಅರ್ಜಿ ಸಲ್ಲಿಸುವುದು ಬಾಕಿ ಇದೆ.

ಇತರೆ ವಿಷಯಗಳು:

ರಾಜ್ಯಾದ್ಯಂತ ರೈಲ್ವೇ ಹೊಸ ರೂಲ್ಸ್! ‘ಒನ್ ಇಂಡಿಯಾ-ಒನ್ ಟಿಕೆಟ್’ ಹೊಸ ನಿಯಮ ಜಾರಿ

ಹಳೆಯ ಪಿಂಚಣಿ ಗುಡ್‌ ನ್ಯೂಸ್ ! ಡಬಲ್‌ ಹಣ, ಡಬಲ್‌ ಲಾಭ; ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಬದಲು ಈ 3 ಆಯ್ಕೆಗಳು

Leave A Reply

Your email address will not be published.