ಶಕ್ತಿ ಯೋಜನೆಯಡಿ ಸಂಚರಿಸೋ ಮಹಿಳೆಯರಿಗೆ ಸಿಹಿ ಸುದ್ದಿ..! ಶಕ್ತಿ ಸ್ಮಾರ್ಟ್ ಕಾರ್ಡ್ ವಿತರಣೆ ಆರಂಭ; ಇಲ್ಲಿಂದ ಕಾರ್ಡ್ ಪಡೆಯಿರಿ
ಹಲೋ ಸ್ನೇಹಿತರೆ, ಸರ್ಕಾರ ಜಾರಿ ಮಾಡಿದ ಮೊದಲ ಗ್ಯಾರೆಂಟಿ ಯೋಜನೆ ಶಕ್ತಿ ಯೋಜನೆ ಜಾರಿಗೆ ಬಂದು ಈಗಾಗಲೇ 3 ತಿಂಗಳಾಗಿದೆ. ಎಲ್ಲಾ ಮಹಿಳೆಯರು ಅಂದಿನಿಂದ ಉಚಿತ ಬಸ್ ಪ್ರಯಾಣ ಮಾಡುತ್ತಾ ಇದ್ದಾರೆ. ಆದರೆ ಸರ್ಕಾರ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡುತ್ತೀವಿ ಎಂದು ಹೇಳಿತ್ತು. ಮಹಿಳೆಯರಿಗೆ ಸರ್ಕಾರ ಈಗ ಗುಡ್ ನ್ಯೂಸ್ ಕೊಟ್ಟಿದ್ದು. ಶೀಘ್ರದಲ್ಲೇ ಈ ಸ್ಮಾರ್ಟ್ ಕಾರ್ಡ್ ವಿತರಣೆ ಕಾರ್ಯ ಆರಂಭವಾಗಲಿದೆ. ಹೇಗೆ ಪಡೆಯುವುದು ಯಾವಾಗ ಕಾರ್ಡ್ ಸಿಗಲಿದೆ ಈ ಎಲ್ಲಾ ಮಾಹಿತಿಯ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ.
ಶಕ್ತಿ ಯೋಜನೆಯಡಿ ಸಂಚರಿಸೋ ಮಹಿಳೆಯರಿಗೆ ಗುಡ್ ನ್ಯೂಸ್. ಶೀಘ್ರದಲ್ಲೇ ಸಿಗತ್ತೆ ಸ್ಮಾರ್ಟ್ ಕಾರ್ಡ್ ನಕಲಿ ಆಧಾರ್ ಕಾರ್ಡ್ ಕೊಟ್ರೆ ತಗಲಾಕಿಕೊಳ್ಳುತ್ತೀರಾ ಹುಷಾರ್. ಇಷ್ಟು ದಿನ ಶಕ್ತಿ ಯೋಜನೆಯಡಿ ಓಡಾದಬೇಕಾದರೆ ಮಹಿಳೆಯರು ಆಧಾರ್ ಕಾರ್ಡ್ ಐಡಿ ಕಾರ್ಡ್ ಗಳನ್ನು ತಮ್ಮ ಜೊತೆಯಲ್ಲೇ ಇಟ್ಟುಕೊಂಡು ಓಡಾಡುತ್ತಿದ್ದರು. ಸದ್ಯದಲ್ಲೇ ನಿಮ್ಮ ದಾಖಲೆ ಹಿಡಿದು ಓಡಾಡೋದಿಕ್ಕೆ ಬ್ರೇಕ್ ಬೀಳತ್ತೆ ಜೊತೆಗೆ ಕೆಲ ದಿನದಲ್ಲೇ ಯೋಜನೆಯ ಸ್ಮಾರ್ಟ್ ಕಾರ್ಡ್ ಕೂಡ ನಿಮ್ಮ ಕೈ ಸೇರತ್ತೆ.
ಇದು ಓದಿ: 400 ರೂ.ಗೆ LPG ಸಿಲಿಂಡರ್; ಪೆಟ್ರೋಲ್-ಡೀಸೆಲ್ ಬೆಲೆ ಕೂಡ ಇಳಿಕೆ; ಸರ್ಕಾರದಿಂದ ಮತ್ತೊಂದು ಘೋಷಣೆ.!
ರಾಜ್ಯ ಸರ್ಕಾರದ ಮೊದಲ ಗ್ಯಾರೆಂಟಿ ಭರವಸೆ ಆರಂಭವಾಗಿ ಇವತ್ತಿಗೆ 92 ದಿನ ಕಳೆದಿದೆ ಯೋಜನೆ ಆರಂಭಕ್ಕೂ ಮುನ್ನ ಮಹಿಳೆಯರ ಸಂಚಾರಕ್ಕೆ ಸಹಾಯವಾಗುವ ಸ್ಮಾರ್ಟ್ ಕಾರ್ಡ್ ಕೊಡೋಕೆ ಸರ್ಕಾರ ಚಿಂತನೆ ಮಾಡಿತ್ತು. ಜೊತೆಗೆ ಯೋಜನೆ ಶುರುವಾದ ಬಳಿಕ ಸ್ಮಾರ್ಡ್ ಕಾರ್ಡ್ ನೀಡುವ ಪ್ರಕ್ರಿಯೆಗೂ ಸಾರಿಗೆ ಇಲಾಖೆಗೆ ಸರ್ಕಾರ ಸೂಚನೆ ನೀಡಿತ್ತು. ಆದರೆ 3 ತಿಂಗಳದರೂ ಈ ಪ್ರಕ್ರಿಯೆ ಮುಗಿದಿಲ್ಲ ಸದ್ಯ ಅಂತಿಮ ಹಂತಕ್ಕೆ ಬಂದಿದ್ದು ಮುಂದಿನ 1 ತಿಂಗಳ ಓಳಗೆ ಸ್ಮಾರ್ಟ್ ಕಾರ್ಡ್ ವಿತರಣೆ ಆರಂಭವಾಗುವ ಕಾರ್ಯ ಬಗ್ಗೆ ಸಾರಿಗೆ ಅಧಿಕಾರಿಗಳು ಮಾಹಿತಿ ಕೊಟ್ಟಿದ್ದಾರೆ. ಈಗಾಗಲೇ ಕೊನೆಯ ಹಂತದಲ್ಲಿರುವ ಪ್ರಕ್ರಿಯೆ ಕೆಲವು ಟೆಕ್ನಿಕಲ್ ವಿಚಾರವಾಗಿ ಅಂತಿಮಗೊಳ್ಳುತ್ತಾ ಇದೆ. ಮುಂದಿನ ತಿಂಗಳ ಓಳಗೆ ವಿತರಣೆ ಪ್ರಕ್ರಿಯೆ ಆರಂಭವಾಗೂ ಸಾಧ್ಯತೆ ಇದೆ.
ಸ್ಮಾರ್ಟ್ ಕಾರ್ಡ್ ವಿತರಣೆ ವೇಳೆ ನಕಲಿ ಆಧಾರ್ ಕಾರ್ಡ್ ಬಳಸಿ ಸ್ಮಾರ್ಟ್ ಕಾರ್ಡ್ ಪಡೆಯೋರ ಮೇಲು ಕೂಡ ಇಲಾಖೆ ಹದ್ದಿನ ಕಣ್ಣಿಟ್ಟಿರತ್ತೆ. ಸ್ಮಾರ್ಟ್ ಕಾರ್ಡ್ ಪಡೆಯುವ ವೇಳೆ ಕಡ್ಡಾಯವಾಗಿ ಆಧಾರ್ ಕಾರ್ಡ್ ಅನ್ನು ನೋದಾಯಿಸಬೇಕು. ಬೆಂಗಳೂರು ಒನ್, ಗ್ರಾಮ ಒನ್ ಸೇವಾ ಸಿಂಧೂಗಳ ಮೂಲಕ ಕಾರ್ಡ್ ಪಡೆಯಲು ಅವಕಾಶ ಇರತ್ತೆ, ಆಧಾರ್ ಕಾರ್ಡ್ ನಲ್ಲಿ ಕೇವಲ ಕರ್ನಾಟಕದೊಳಗಿನ ವಿಳಾಸ ಇದ್ರೆ ಮಾತ್ರ ಸಿಗತ್ತೆ. ಒಂದೊಮ್ಮೆ ನೀವು ಬೇರೆ ರಾಜ್ಯದವರಾಗಿದ್ದೂ ಆಧಾರ್ ಕಾರ್ಡ್ ನಲ್ಲಿ ವಿಳಾಸ ಬದಲಾಯಿಸಿಕೊಂಡು ಬಂದರೆ ನಿಮಗೆ ಸ್ಮಾರ್ಟ್ ಕಾರ್ಡ್ ಸಿಗೋದು ಡೌಟ್. ಸದ್ಯ ಸ್ಮಾರ್ಟ್ ಕಾರ್ಡ್ ವಿತರಣೆಯಲ್ಲಿ ನಕಲಿ ತಡೆಯುವುದು ಜೊತೆಗೆ ಅಕ್ರಮ ಆದ್ರೆ ಪತ್ತೆ ಹಚ್ಚೋದು ಹೇಗೆ ಅನ್ನೋದರ ಬಗ್ಗೆ ಟೆಕ್ನಿಕಲ್ ವಿಚಾರದ ಬಗ್ಗೆ ಇಲಾಖೆ ಸಂಬಂಧಪಟ್ಟ ತಜ್ಞರ ಜೊತೆ ಚರ್ಚೆ ಮಾಡುತ್ತಾ ಇದೆ. ಶೀಘ್ರದಲ್ಲೆ ವಿತರಣೆ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆ ಇದೆ.
ಇತರೆ ವಿಷಯಗಳು:
ಉಚಿತ ರೇಷನ್ ಪಡೆಯುವವರಿಗೆ ಬಿಗ್ ಅಲರ್ಟ್: ಸೆಪ್ಟೆಂಬರ್ 30ರೊಳಗೆ ಈ ಕೆಲಸ ಮಾಡದಿದ್ದರೆ ಭಾರೀ ನಷ್ಟ
ನೌಕರರು ಕಾಯುತ್ತಿದ್ದ ಸಮಯಕ್ಕೆ ಕೂಡಿ ಬಂತು ಘಳಿಗೆ.! ಡಿಎ ಶೇ.47 ರಷ್ಟು ಏರಿಕೆ, ಸಂಬಳದಲ್ಲೂ ಬಂಪರ್ ಹೆಚ್ಚಳ