ಶಕ್ತಿ ಯೋಜನೆ ಹೊಸ ಹೆಜ್ಜೆ: ಮಹಿಳೆಯರ ಸುರಕ್ಷತೆಗೆ ಸರ್ಕಾರದ ಹೊಸ ನಿರ್ಧಾರ.! ಬಸ್‌ಗಳಲ್ಲಿ GPS ಪ್ಯಾನಿಕ್ ಬಟನ್ ಅಳವಡಿಕೆ
ಹಲೋ ಸ್ನೇಹಿತರೆ, ಮಹಿಳೆಯರಿಗೆ ಉಚಿತ ಪ್ರಯಾಣದ ಉಡುಗೊರೆ ನೀಡಿರುವ ರಾಜ್ಯ ಸರ್ಕಾರ ಇದೀಗ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದೆ ಅದರಲ್ಲೂ ಖಾಸಗಿ ಬಸ್ ಗಳಲ್ಲಿ ಪ್ರಯಾಣಿಸುವ ಮಹಿಳೆಯರ ಸುರಕ್ಷತೆಗಾಗಿ ಹೊಸ ಆದೇಶ ಹೊರಡಿಸಿದೆ. ಏನದು ಹೊಸ ಆದೇಶ? ಇದರಿಂದ ಮಹಿಳೆಯರಿಗೆ ಏನು ಪ್ರಯೋಜನ ಈ ಎಲ್ಲಾ ಮಾಹಿತಿಯ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ.
ಮಹಿಳೆಯರ ಸುರಕ್ಷತೆಗೆ ಸಾರಿಗೆ ಇಲಾಖೆ ಹೊಸ ಆದೇಶ ಹೊರಡಿಸಿದೆ. ಖಾಸಗಿ ಬಸ್‌ಗಳಲ್ಲಿ GPS ಪ್ಯಾನಿಕ್ ಬಟನ್ ಅಳವಡಿಕೆಗೆ ಆದೇಶ. ಶಕ್ತಿ ಯೋಜನೆಯ ಮೂಲಕ ಫ್ರೀ ಸಂಚಾರ ಮೂಲಕ ಗಿಫ್ಟ್ ನೀಡಿರುವ ರಾಜ್ಯ ಸರ್ಕಾರ, ಈಗ ಮತ್ತೊಂದು ಗುಡ್ ನ್ಯೂಸ್ ನೀಡಿದೆ ಖಾಸಗಿ ಬಸ್ ಗಳಲ್ಲಿ ಸಂಚರಿಸುವ ಮಹಿಳೆಯರಿಗೆ ಹೊಸ ಹೆಜ್ಜೆ ಇಟ್ಟಿದೆ. ಬಸ್‌ಗಳಲ್ಲಿ ಪ್ಯಾನಿಕ್ ಬಟನ್ ಮತ್ತು GPS ಅಳವಡಿಕೆಗೆ ಸಾರಿಗೆ ಇಲಾಖೆ ಆದೇಶಿಸಿದೆ. BMTC ಬಸ್‌ಗಳಲ್ಲಿ ಇರುವಂತೆ ಖಾಸಗಿ ಬಸ್ ಗಳಲ್ಲಿ ಆಳವಡಿಸುವಂತೆ ಸೂಚಿಸಲಾಗಿದೆ.
ಇದನ್ನೂ ಸಹ ಓದಿ: ಗ್ಯಾರೆಂಟಿ ಯೋಜನೆ ಮಾದರಿಯಲ್ಲೇ ಹೊಸ ಯೋಜನೆಗೆ ಪ್ಲಾನ್..! ವೈದ್ಯರನ್ನು ಮನೆ ಬಾಗಿಲಿಗೆ ಕರೆಸಿ ತಪಾಸಣೆ
ನಿರ್ಭಯ ಯೋಜನೆಯಡಿ ಸರ್ಕಾರ ಹೆಜ್ಜೆ ಇಟ್ಟಿದೆ ಖಾಸಗಿ ಬಸ್ ಗಳಲ್ಲಿ ಪ್ಯಾನಿಕ್ ಅಳವಡಿಕೆ ಮಹಿಳೆಯರ ಸುರಕ್ಷತೆ ಕಾಪಾಡೋದು GPS ಮೂಲಕ ಬಸ್ ಯಾವ ಮಾರ್ಗದಲ್ಲಿ ಚಲಿಸಲಿದೆ ಎಂದು ಅಧಿಕಾರಿಗಳು ಹದ್ದಿನ ಕಣ್ಣು ಇಡಲಿದ್ದಾರೆ. 2016 ರಲ್ಲಿ ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶವನ್ನು ನಾವು ಪಾಲಿಸುತ್ತಿದ್ದೇವೆ ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ಹೇಳಿದ್ದಾರೆ.
ಅಂದಹಾಗೇ ಸರ್ಕಾರಿ ಬಸ್‌ಗಳ ಜೊತೆಗೆ ಖಾಸಗಿ ಬಸ್ಗಳಿಗೂ ಪ್ಯಾನಿಕ್ ಬಟನ್ ಅಳವಡಿಸಲು ಮುಂದಾಗಿದೆ. ಬೆಂಗಳೂರಿನಲ್ಲಿ ಸೆಂಟರ್ ಒಂದನ್ನೂ ತೆರೆದು ನಿರ್ವಹಣೆ ಮಾಡಲಿದೆ. ಪ್ಯಾನಿಕ್ ಬಟನ್ ಒತ್ತುವ ಮೂಲಕ ಸಹಾಯ ಕೊರುವ ಮಹಿಳೆಯರಿಗೆ ನೆರವಾಗಲು ತಯಾರಿ ನೆಡೆಸುತ್ತಿದೆ. ಆದರೆ ಇಲ್ಲಿ ಖಾಸಗಿ ಬಸ್‌ಗಳ ಪ್ಯಾನಿಕ್ ಬಟನ್ GPS ಟ್ರ್ಯಾಕ್ ಸಿಸ್ಟಮ್ ಇನ್ನಿತರ ಪರಿಕರಗಳನ್ನು ಬಸ್ ಮಾಲಿಕರೇ ಭರಿಸಬೇಕಿದೆ. ಇದಕ್ಕೆ ಮಾಲಿಕರು ಆಕ್ರೋಶ ಹೊರಹಾಕಿದ್ದಾರೆ. ಶಕ್ತಿ ಯೋಜನೆಯಿಂದ ಖಾಸಗಿ ಬಸ್ ಗಳು ಕಷ್ಟದಲ್ಲಿವೆ ಹೀಗಾಗಿ ನಾವು ಎಂದು ಹೇಳಿದ್ದಾರೆ.
ಇತರೆ ವಿಷಯಗಳು:
ದುಬಾರಿ ಗ್ಯಾಸ್ ಚಿಂತೆ ಬೇಡ: LPG ಬೆಲೆ 200 ರೂ. ಇಳಿಕೆ ಬೆನ್ನಲ್ಲೇ ಗ್ಯಾಸ್ ಬೆಲೆ ಮತ್ತೆ ಅಗ್ಗ; ಹೊಸ ದರ ಜಾರಿ