ಕರೆಂಟ್ ಕಟ್‌ನಿಂದ ಬೇಸತ್ತ ಜನ..! ಅಘೋಷಿತ ಲೋಡ್ ಶೆಡ್ಡಿಂಗ್, ಹೆಚ್ಚಾಯ್ತು UPS ಬೆಲೆ;
ಹಲೋ ಸ್ನೇಹಿತರೆ, ಸರ್ಕಾರ ಲೋಡ್ ಶೆಡ್ಡಿಂಗ್ ಜಾರಿ ಮಾಡಿಲ್ಲ ಆದರೆ ಪ್ರತಿ ನಿತ್ಯ ಕನಿಷ್ಠ 1 ರಿಂದ 2 ಗಂಟೆ ಲೋಡ್ ಶೆಡ್ಡಿಂಗ್ ಅನಧಿಕೃತವಾಗಿ ಆಗುತ್ತಾ ಇದೆ. ಬೆಂಗಳೂರಿಗರು ಒಂದು ಪರ್ಯಾಯ ಮಾರ್ಗವನ್ನು ಕಂಡುಕೊಂಡಿದ್ದಾರೆ ಅದುವೆ ಯುಪಿಎಸ್. ಈ ಲೋಡ್ ಶೆಡ್ಡಿಂಗ್ ನಿಂದಾಗಿ ಬೆಸತ್ತಾ ಜನರು ಯುಪಿಎಸ್ ಖರೀದಿಗೆ ಮುಂದಾಗಿದ್ದಾರೆ. ಇದರಿಂದ ಯುಪಿಎಸ್ ಬೆಲೆ ಏರಿಕೆಯಾಗಿದೆ. ಎಷ್ಟು ಏರಿಕೆಯಾಗಿದೆ? ಬೆಲೆ ಏರಿಕೆಗೆ ಕಾರಣವೇನು? ಈ ಮಾಹಿತಿಯ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ.
ಬೆಂಗಳೂರಿನ ಸುತ್ತಾ ಮುತ್ತಾ ಲೋಡ್ ಶೆಡ್ಡಿಂಗ್ ಆರಂಭವಾಗಿದೆ. ನಗರದಲ್ಲಿ ಏಕಾಎಕಿ ಏರಿಕೆಯಾದ ಯುಪಿಎಸ್ ಬ್ಯಾಟರಿ ವ್ಯವಹಾರ ಕರೆಂಟ್ ಕಟ್ ಗೆ ಬೆಸತ್ತಾ ಜನರು ಬ್ಯಾಟರಿ ಮೊರೆಹೋಗಿದ್ದಾರೆ. ಬೆಂಗಳೂರಿನಲ್ಲಿ ಏಕಾಎಕಿ ಯುಪಿಎಸ್ ವ್ಯಾಪಾರ ಜೋರಾಗಿದೆ. ಕಳೆದ 2 ವರ್ಷಗಳಿಂದ ಕೊರೋನಾ ಆವರಿಸಿ ವ್ಯಾಪಾರದಲ್ಲಿ ಇಳಿಕೆಯಾಗಿತ್ತು. ಈಗ ವ್ಯಾಪಾರ ಮತ್ತೆ ಶುರುವಾಗಿದೆ. ಕಳೆದ 1 ತಿಂಗಳಿನಿಂದ ವ್ಯಾಪಾರ ಚೆನ್ನಾಗಿ ನಡೀತಾ ಇದೆಯಂತೆ.
ಇದನ್ನು ಓದಿ: ಸರ್ಕಾರದಿಂದ ರೈತರ ಸಾಲ ಮನ್ನಾ ಘೋಷಣೆ..! KCC ಸಾಲದಿಂದ ರೈತರಿಗೆ ಮುಕ್ತಿ; 1 ಲಕ್ಷ ಸಾಲ ಮನ್ನಾ
ಕಳೆದ ಕೆಲ ದಿನಗಳಿಂದ ಬೆಂಗಳೂರು ಸೇರಿ ರಾಜ್ಯದ ಹಲವು ಕಡೆ ನಗರದ ಸುತ್ತಾ ಮುತ್ತಾ ಅಘೋಷಿತ ಲೋಡ್ ಶೆಡ್ಡಿಂಗ್ ಎಫೆಕ್ಟ್ ಜನರನ್ನು ಯುಪಿಎಸ್ ಮೊರೆಹೋಗುವಂತೆ ಮಾಡಿದೆ. ಇದರಿಂದಾಗಿ ನಗರದಲ್ಲಿ ಏಕಾಏಕಿ ಯುಪಿಎಸ್ ಬ್ಯಾಟರಿ ವ್ಯಾಪಾರ ಜೋರಾಗಿದೆ. ಬೆಂಗಳೂರು ಸೇರಿದಂತೆ ರಾಮನಗರ ಹೊಸಕೋಟೆ ಕೋಲಾರ ದೊಡ್ಡಬಳ್ಳಾಪುರ ಕಕನಪುರ ಮಾಗಡಿ ಭಾಗದಿಂದಲು ಯುಪಿಎಸ್ ಖರೀದಿಗೆ ಜನ ಆಗಮಿಸುತ್ತಾ ಇದ್ದಾರೆ.
ಬ್ಯಾಟರಿ ಉದ್ಯಮದ ಹಬ್ ಆಗಿರುವ ಸಿದ್ದಯ್ಯ ರಸ್ತೆ ಫುಲ್ ಬ್ಯುಸಿಯಾಗಿದೆ. ಒಟ್ಟಾರೆ ಸರ್ಕಾರದ ಈ ಅಘೋಷಿತ ಲೋಡ್ ಶೆಡ್ಡಿಂಗ್ ನಿಂದಾಗಿ ಕಳೆದೊಂದು ತಿಂಗಳಿನಿಂದ ವ್ಯಾಪಾರಿಗಳಿಗೆ ಖುಷಿ ತರಿಸಿದ್ರೆ ವ್ಯಾಪಾರಿಗಳಿಗೆ ಮತ್ತಷ್ಟು ಹೊರೆಯಾಗಿದೆ.