Breaking News: ಈ ಬಾರಿ ದುಬಾರಿ ವರಮಹಾಲಕ್ಷ್ಮೀ..! ಮಹಿಳೆಯರ ಸಂಭ್ರಮಕ್ಕೆ ದರ ಏರಿಕೆ ಬರೆ; ಹೂವು ಹಣ್ಣು ಖರೀದಿಗೆ ಮಾರುಕಟ್ಟೆಗೆ ಹೋದ್ರೆ ಗಾಬರಿ ಗ್ಯಾರೆಂಟಿ
ಹಲೋ ಸ್ನೇಹಿತರೆ, ರಾಜ್ಯಾದ್ಯಂತ ನಾಳೆ ವರಮಾಹಾಲಕ್ಷ್ಮೀ ಹಬ್ಬದ ಸಡಗರ ಸಂಭ್ರಮ ಮನೆ ಮಾಡ್ತಾ ಇದೆ ನಾಳೆ ಅತ್ಯಂತ ಸಂಭ್ರಮದಿಂದ ಹಬ್ಬ ಆಚರಿಸಬೇಕು ಎಂದು ಮಹಿಳೆಯರು ಪ್ಲಾನ್ ಆದರೆ ದರ ಏರಿಕೆಯ ಬರೆ ಮಾತ್ರ ಸಾರ್ವಜನಿಕರಿಗೆ ತಟ್ಟುತ್ತಾ ಇದೆ. ಬೆಳ್ಳಬೆಳಿಗ್ಗೆನೆ ಜನ ವಸ್ತಗಳನ್ನು ಖರೀದಿ ಮಾಡಲು ಮುಂದಾಗಿದ್ದಾರೆ. ವರಮಹಾಲಕ್ಷ್ಮೀ ಹಬ್ಬಕ್ಕೆ ಹೂವು ಹಣ್ಣು ಬೆಲೆ ಜಾಸ್ತಿಯಾಗಿ ಬಿಟ್ಟಿದೆ. ಯಾವ ವಸ್ತುವಿನ ಬೆಲೆ ಎಷ್ಟು ಹೆಚ್ಚಾಗಿದೆ? ಈ ಮಾಹಿತಿಯ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ.
ಈ ಬಾರಿ ದುಬಾರಿ ವರಮಹಾಲಕ್ಷ್ಮೀ ಶ್ರಾವಣ ಸಂಭ್ರಕ್ಕೆ ಈಗ ವರಮಹಾಲಕ್ಷ್ಮೀ ಸಡಗರವೂ ಸೇರಿಕೊಂಡಿದೆ. ಮುತೈದೆಯರು ಸಡಗರ ಸಂಭ್ರಮದಿಂದ ಆಚರಿಸುವ ಹಬ್ಬ ಇದು. ವರಮಹಾಲಕ್ಷ್ಮೀ ಹಬ್ಬಕ್ಕೆ ಮನೆಯಲ್ಲಿ ದೇವಿಯನ್ನು ಕೂರಿಸಿ ಹಬ್ಬ ಮಾಡಿ ದೇವಿಗೆ ಇಷ್ಟವಾದ ಹಣ್ಣು ಇಟ್ಟು ಸಂಭ್ರಮ ಪಡುವ ಕ್ಷಣ ವರಮಹಾಲಕ್ಷ್ಮೀ. ಇದರ ಹಿನ್ನಲೆಯಲ್ಲಿ ಶಾಪಿಂಗ್ ಜೋರಾಗಿದೆ ಆದರೆ ಮಾರುಕಟ್ಟೆ ಹೋದರೆ ಗಾಬರಿಯಾಗೋದು ಪಕ್ಕಾ ಯಾಕಂದ್ರೆ ಹೂವು ಹಣ್ಣಿನ ದರ 3 ಪಟ್ಟು ಹೆಚ್ಚಾಗಿದೆ.
ಇದನ್ನೂ ಸಹ ಓದಿ: ಗೃಹಲಕ್ಷ್ಮೀ ಹಣ ಬಿಡುಗಡೆಗೆ ಡೆಡ್‌ಲೈನ್! ಸಿಎಂ ತವರು ಜಿಲ್ಲೆಯಲ್ಲಿ ಯೋಜನೆಗೆ ಚಾಲನೆ; 1.10 ಕೋಟಿ ಕುಟುಂಬದ ಮಹಿಳೆಯ ಖಾತೆಗೆ ₹2,000
ನಾಳೆ ನಾಡಿದ್ಯಾದ್ಯಂತ ವರಮಹಾಲಕ್ಷ್ಮೀ ಸಂಭ್ರಮ ಕೆ ಆರ್ ಮಾರುಕಟ್ಟೆಯಲ್ಲಿ ಜನ ವಸ್ತುಗಳನ್ನು ಖರೀದಿ ಮಾಡಲು ಮುಗಿಬಿದ್ದಿದ್ದಾರೆ. ನನಕಾಂಬರ ಕೆಜಿಗೆ 1200 ರೂ ಆಗಿದೆ. ಮಲ್ಲಿಗೆ 600 ರಿಂದ 800 ಗುಲಾಬಿ 150 ರಿಂದ 200 ರೂ. ಸೇವಂತಿಗೆ 250 ರಿಂದ 300 ರೂ ಆಗಿದೆ.
ತಾವರೆ ಹೂವು ಜೊಡಿಗೆ 50 ರಿಂದ 100 ರೂ ಆಗಿದೆ. ಹಾಗೆ ಹಬ್ಬಕ್ಕೆ ಬೇಕಾಗಿರುವ ಬಾಳೆ ಕಂಬ ಜೋಡಿಗೆ 50 ರೂ ಇದ್ದರೆ ಮಾವಿನ ತೋರಣ 20 ರೂ ಇದೆ. ಜೊತೆಗೆ ಏಲಕ್ಕಿ ಬಾಳೆ 120 ರಿಂದ 140 ಇದ್ದರೆ ಸೇಬು 200 ರಿಂದ 300 ರೂ ಆಗಿದೆ. ಬೆಳಿಗ್ಗೆ 4:30 5 ಗಂಟೆಯಿಂದಾನೆ ಖರೀದಿ ಶುರು ಮಾಡಿದ್ದಾರೆ. ನಾಳೆಯೇ ಹಬ್ಬ ಇರುವುದರಿಂದ ವಸ್ತುಗಳ ಖರೀದಿಗೆ ಜನ ಮುಗಿಬಿದ್ದಿದ್ದಾರೆ.