ಹಬ್ಬಕ್ಕೆ ಈರುಳ್ಳಿ ಬೆಲೆ ಏರಿಕೆ ಬರೆ..! ಏಕಾಎಕಿ ಗಗನಕ್ಕೇರಿದ ಬೆಲೆ..! ರಾಜ್ಯಕ್ಕೆ ಬರುವ ಈರುಳ್ಳಿ ಪ್ರಮಾಣದಲ್ಲಿ ಭಾರೀ ಇಳಿಕೆ
ಹಲೋ ಸ್ನೇಹಿತರೆ, ಟಮೊಟೊ ಬೆಲೆ 250 ರ ದಾಟಿ ಈಗ ನೆಲಕ್ಕೆ ಅಪ್ಪಳಿಸಿದೆ. ಈಗ ಮುಂದಿನ ಸರದಿ ಈರುಳ್ಳಿ, ಈರುಳ್ಳಿ ಬೆಲೆ ಏಕಾಎಕಿ ಬೆಲೆ ಏರಿಕೆ ಆಗ್ತಾ ಇದೆ. ಒಂದು ಕಡೆ ಮಳೆ ಇಲ್ಲದೆ ಈರುಳ್ಳಿ ಬೆಳೆಗಾರ ಕಂಗಾಲಾಗಿದ್ದರೆ ಬೇರೆ ರಾಜ್ಯದಿಂದ ಕರ್ನಾಟಕಕ್ಕೆ ಸರಬರಾಜು ಅಗುವ ಈರುಳ್ಳಿ ಗುಣಮಟ್ಟ ಕೂಡ ಕಡಿಮೆ ಯಾಗಿದೆ. ಯಾವಾಗ ಈರುಳ್ಳಿ ಸರಬರಾಜು ಕಡಿಮೆಯಾಯ್ತು, ಸಹಜವಾಗಿ ಇನ್ನಷ್ಟೂ ಹಬ್ಬಗಳಲ್ಲಿ ಜಾಸ್ತಿಯಾಗುವ ನಿರೀಕ್ಷೆ ಇದೆ. ಎಷ್ಟು ಏರಿಕೆಯಾಗಬಹುದು? ಈ ಮಾಹಿತಿಯ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ.
ರಾಜ್ಯಕ್ಕೆ ಬರುವ ಈರುಳ್ಳಿ ಪ್ರಮಾಣದಲ್ಲಿ ಭಾರೀ ಇಳಿಕೆ ಕಂಡುಬರುತ್ತಿದೆ. ಕಳೆದ ವರ್ಷ ಭಾರೀ ಮಳೆಯಿಂದ ಈ ಈರುಳ್ಲಿ ಬೆಳೆದ ರೈತರು ಸೂಕ್ತ ಬೆಲೆ ಹಾಗೂ ಪ್ರಮಾಣದಲ್ಲಿ ಇಳುವರಿ ಬಾರದೆ ಸಂಕಷ್ಟಕ್ಕೆ ಸಿಲುಕಿದ್ದರು. ಈ ವರ್ಷ ಕೂಡ ಮುಂಗಾರು ಕೈ ಕೊಟ್ಟ ಹಿನ್ನಲೆಯಲ್ಲಿ ರಾಜ್ಯದಲ್ಲಿ ಈರುಳ್ಳಿ ಬೆಲೆ ಗಣನೀಯವಾಗಿ ಇಳಿಕೆ ಕಂಡಿದೆ. ಈ ನಡುವೆ ಮಹಾರಾಷ್ಟ್ರ ರಾಜ್ಯದಿಂದ ಬರುವ ಈರುಳ್ಳಿ ಈಗಾಗಲೇ ಮಾರುಕಟ್ಟೆಯಲ್ಲಿ ಖಾಲಿ ಯಾಗಿದೆ. ಹೀಗಿರುವಾಗ ಗಣನೀಯವಾಗಿ ಈರುಳ್ಳಿ ಬೆಲೆ ಏರಿಕೆಯಾಗುವ ಮುನ್ಸೂಚನೆ ಇದೆ ಎಂದು ತಿಳಿಸಿದ್ದಾರೆ.
ಮಧ್ಯವರ್ತಿಗಳ ಹಾವಳಿಯಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ರೈತರಿಗೆ ಸಿಗಬೇಕಾದ ಬೆಂಬಲ ಬೆಲೆ ಸಿಗುತ್ತಿಲ್ಲ ಪರಿಣಾಮ ಸಾಲ ಸೂಲ ಮಾಡಿ ಬೆಳೆದ ಬೆಳೆಗಳಿಗೂ ಸೂಕ್ತ ಬೆಲೆ ಸಿಗುತ್ತಿಲ್ಲ ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ 50% ರೈತರು ಈರುಳ್ಳಿ ಬೆಳೆಯನ್ನು ಕೈ ಬಿಟ್ಟಿದ್ದಾರೆ ಎನ್ನಲಾಗಿದೆ. ಹೀಗಾಗಿ ರಾಜ್ಯದಲ್ಲಿ ಗಣನೀಯವಾಗಿ ಈರುಳ್ಳಿ ಬೆಲೆ ಹೆಚ್ಚಾಗುವಂತಹ ನಿರೀಕ್ಷೆ ಇದೆ.
ಒಟ್ಟಾರೆ ಮಳೆಯ ಪ್ರಮಾಣದಲ್ಲಿ ಏರುಪೇರು ಆದ್ರೆ ಏನೆಲ್ಲಾ ಸಮಸ್ಯೆ ಆಗಬಹುದು ಎನ್ನುವುದಕ್ಕೆ ಈರುಳ್ಳಿಬೆಲೆನೆ ಸಾಕ್ಷಿಯಾಗಿದೆ. ಹೀಗಾಗಿ ಮುಂದಿನ ದಿನದಲ್ಲಿ ಈರುಳ್ಳಿ ಕೂಡ ಜನರಿಗೆ ಖಾರವಾಗುವ ಎಲಾ ಲಕ್ಷಣ ಸಾಮನ್ಯವಾಗಿದೆ.
ಇತರೆ ವಿಷಯಗಳು:
ಎದೆನೋವು ಎಂದು ಆಸ್ಪತ್ರೆಗೆ ದಾಖಲಾದವರಲ್ಲಿ ಹೃದಯಾಘಾತ.! ಸ್ಟೆಮಿ ಯೋಜನೆಯಡಿಯಲ್ಲಿ ಆತಂಕಕಾರಿ ವಿಷಯ ಬಯಲು